alex Certify ಯೂಟ್ಯೂಬ್ ನೋಡಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟ 8 ರ ಪೋರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ನೋಡಿ 3 ಕೋಟಿ ಹಣಕ್ಕೆ ಬೇಡಿಕೆ ಇಟ್ಟ 8 ರ ಪೋರ….!

ಈ ಬಾಲಕ ಉತ್ತರಾಖಂಡ್ ಪೊಲೀಸರಿಗೆ ಸತತ ಎರಡು ದಿನಗಳ ಕಾಲ ಭಾರೀ ನೀರು ಕುಡಿಸಿದ್ದಾನೆ. ಈ ಪೋರ ಮಾಡಿದ ಅವಾಂತರವೆಂದರೆ, ವೈದ್ಯರೊಬ್ಬರಿಗೆ ಕರೆ ಮಾಡಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬೆದರಿಕೆ ಕರೆ ಮಾಡಿದವರಾರು ಎಂಬುದನ್ನು ಪತ್ತೆ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಆಗಿದ್ದಾದರೂ ಏನು? ಪಶ್ಚಿಮ ಉತ್ತರ ಪ್ರದೇಶದ ಹರ್ಪುರದ ಬಾಲಕ ಹಿರಿಯ ಇ ಎನ್ ಟಿ ವೈದ್ಯರಾದ ಡಾ.ವೈಭವ್ ಕುಚ್ಚಲ್ ಎಂಬುವರಿಗೆ ಕರೆ ಮಾಡಿ 3 ಕೋಟಿ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಕೂಡಲೇ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ಕರೆ ಮಾಡಿದ ಫೋನ್ ಹರ್ಪುರದ ಫರ್ನಿಚರ್ ಅಂಗಡಿ ಮಾಲೀಕನಿಗೆ ಸೇರಿದ್ದು ಎಂಬ ಸಂಗತಿ ಪತ್ತೆಯಾಗಿದೆ.

ಅಂದರೆ, ಈ ಮಾಲೀಕನೇ ಕರೆ ಮಾಡಿದ ಬಾಲಕನ ತಂದೆಯಾಗಿದ್ದ. ಈ ಮೊಬೈಲ್ ಫೋನನ್ನು ಮಾಲೀಕನ ಪತ್ನಿ ಬಳಸುತ್ತಿದ್ದಳು. ಕಳೆದ ಸೋಮವಾರ ಪೋಷಕರು ವೈದ್ಯರ ಬಳಿಗೆ ಹೋದ ಸಂದರ್ಭದಲ್ಲಿ ಡಾ.ಕುಚ್ಚಲ್ ಗೆ ಫೋನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರ ಬಗ್ಗೆ ಮಾಹಿತಿ ದೊರೆತಿದೆ.

BIG NEWS: ಕುತೂಹಲಕ್ಕೆ ಕಾರಣವಾಯ್ತು BSY ಜೊತೆಗಿನ ಬಸವರಾಜ ಬೊಮ್ಮಾಯಿ ಭೇಟಿ

ತಂದೆಯ ಜೊತೆಗೆ ಬಾಲಕನನ್ನು ಕರೆಯಿಸಿಕೊಂಡು ವಿಚಾರಣೆ ನಡೆಸಿದಾಗ ಬಾಲಕ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ ಮತ್ತು ನಿರಂತರವಾಗಿ ವಿಡಿಯೋ ಗೇಮ್ ಮತ್ತು ಯೂಟ್ಯೂಬ್ ಬಳಸುತ್ತಿದ್ದುದು ಗೊತ್ತಾಗಿದೆ.

ಬಾಲಕ ಪದೇಪದೆ ಅಂದಾಜಿನ ಮೇಲೆ ಡಾ.ಕುಚ್ಚಲ್ ಅವರ ಸಂಖ್ಯೆಗೆ ಕರೆ ಮಾಡಿದ್ದಾನೆ. ಈ ಕರೆ ಮಾಡಲು ಆತನಿಗೆ ಯೂಟ್ಯೂಬ್ ನಲ್ಲಿ ಬರುವ ಗಾಯಕ ಟೋನಿ ಕಕ್ಕರ್ ಮ್ಯೂಸಿಕ್ ವಿಡಿಯೋ ಪ್ರೇರಣೆಯಾಗಿದೆಯಂತೆ.

ಈ ಮ್ಯೂಸಿಕ್ ಆಲ್ಬಂನ ಶೀರ್ಷಿಕೆ “No. likh 98971” ಆಗಿದೆ. ಅದೇರೀತಿ ಡಾ.ಕುಚ್ಚಲ್ ಅವರ ದೂರವಾಣಿ ಸಂಖ್ಯೆಯೂ ಸಹ 98971 ರಿಂದ ಆರಂಭವಾಗುತ್ತದೆ. ಹೀಗೆ ಅಂದಾಜಿನ ಮೇಲೆ ಮುಂದಿನ ಸಂಖ್ಯೆಗಳನ್ನು ಒತ್ತಿ ಬಾಲಕ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...