alex Certify ಹಲವು ಗಂಟೆ ಹಾರಾಡಿದ ಬಳಿಕ ಪುನಃ ಮೂಲ ಸ್ಥಾನದಲ್ಲಿ ಲ್ಯಾಂಡ್​ ಆದ ವಿಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲವು ಗಂಟೆ ಹಾರಾಡಿದ ಬಳಿಕ ಪುನಃ ಮೂಲ ಸ್ಥಾನದಲ್ಲಿ ಲ್ಯಾಂಡ್​ ಆದ ವಿಮಾನ

ಹಲವು ಗಂಟೆಗಳ ಪ್ರಯಾಣದ ಬಳಿಕ ನೀವು ಹೋಗಬೇಕಿರುವ ಜಾಗವನ್ನು ಬಿಟ್ಟು ಮರಳಿ ನಿಮ್ಮ ಮೂಲ ಸ್ಥಾನಕ್ಕೆ ಬಂದರೆ ಹೇಗಿರುತ್ತದೆ? ಅಂಥದ್ದೇ ಒಂದು ವಿಚಿತ್ರ ಇಲ್ಲಿಯೂ ನಡೆದಿದೆ.

ಜಪಾನ್ ಏರ್​ಲೈನ್ಸ್​ನಲ್ಲಿ ಇದೇ ರೀತಿ ಎಡವಟ್ಟು ಆಗಿದೆ. ಫುಕುವೊಕಾಗೆ ತೆರಳುತ್ತಿದ್ದ ಈ ವಿಮಾನ ಸಂಪರ್ಕ ಕಡಿದುಕೊಂಡು ಪುನಃ ಮೂಲ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್​ ಆಗಿದೆ. ಇದರಲ್ಲಿದ್ದ 300 ಕ್ಕೂ ಹೆಚ್ಚು ಪ್ರಯಾಣಿಕರು ಕಂಗಾಲಾಗಿ ಹೋದ ಘಟನೆ ನಡೆದಿದೆ.

ಫೆಬ್ರವರಿ 19 ರಂದು ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಿಂದ JL331 ವಿಮಾನವು ಫುಕುವೋಕಾಕ್ಕಾಗಿ ಹೊರಟಿತ್ತು. ಮೊದಲು ಸುಮಾರು 2 ಗಂಟೆಗಳ ಕಾಲ ಪ್ರಯಾಣ ಸುಗಮವಾಗಿಯೇ ನಡೆದಿತ್ತು. ನಂತರ ವಿಮಾನ ಸಂಪರ್ಕ ಕಳೆದುಕೊಂಡಿತು. ಏಳು ಗಂಟೆ ಸುಮಾರು 800 ಕಿಲೋ ಮೀಟರ್​ ಹಾರಾಟ ನಡೆಸಿದ ಬಳಿಕ ಹವಾಮಾನದ ವೈಪರೀತ್ಯದಿಂದಾಗಿ ಹೀಗಾಯಿತು. ವಿಮಾನವು ಕೊನೆಯ ಕ್ಷಣದಲ್ಲಿ ವಾಪಸ್​ ಹೋಗಲೇಬೇಕಾದ ಅನಿವಾರ್ಯತೆ ಉಂಟಾಯಿತು. ಕೆಲವು ಗಂಟೆ ಹಾರಾಟದ ಬಳಿಕ ಪುನಃ ಹನೆಡಾ ನಿಲ್ದಾಣಕ್ಕೆ ವಾಪಸಾಗಿದೆ. ನಂತರ ಮಾರನೆಯ ದಿನ ಈ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...