alex Certify ‘ಕಾಂಡೋಮ್’ ಬಳಕೆ ಮಾಡುವ ಮುನ್ನ ಪುರುಷರಿಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂಡೋಮ್’ ಬಳಕೆ ಮಾಡುವ ಮುನ್ನ ಪುರುಷರಿಗೆ ತಿಳಿದಿರಲಿ ಈ ವಿಷಯ

ಗರ್ಭಾವಸ್ಥೆಯನ್ನು ತಪ್ಪಿಸಲಿಕ್ಕೋಸ್ಕರ ಕಾಂಡೋಮ್​ ಬಳಕೆ ಮಾಡಲಾಗುತ್ತೆ. ಆದರೆ ಕೆಲವೊಮ್ಮೆ ನೀವು ಕಾಂಡೋಮ್​ ಬಳಕೆ ಮಾಡಿದ ಬಳಿಕವೂ ಗರ್ಭ ಧರಿಸುವ ಸಾಧ್ಯತೆ ಇರುತ್ತದೆ. ಲೈಂಗಿಕ ಕ್ರಿಯೆಯ ವೇಳೆ ಕಾಂಡೋಮ್​​ ಹಾನಿಯಾಗುವ ಅಥವಾ ಜಾರಿ ಹೋಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಗರ್ಭ ಧರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಲೈಂಗಿಕ ಕ್ರಿಯೆಯ ವೇಳೆ ಶಿಶ್ನದಿಂದ ಕಾಂಡೋಮ್​ಗಳು ಜಾರಿ ಹೋಗಬಹುದು. ಯೋನಿಯ ಒಳಗೆ ಕಾಂಡೋಮ್​ಗಳು ಒಡೆದು ಹೋಗುವ ಸಾಧ್ಯತೆ ಕೂಡ ಇರುತ್ತದೆ. ಒಂದು ವೇಳೆ ಮಹಿಳೆಯರು ಕಾಂಡೋಮ್​ಗಳನ್ನು ಬಳಕೆ ಮಾಡುತ್ತಿದ್ದಲ್ಲಿ ಕಾಂಡೋಮ್​ ಹಾಗೂ ಯೋನಿಯ ನಡುವೆ ಶಿಶ್ನ ಜಾರಿ ಬಿಡಬಹುದು. ಈ ಸಂದರ್ಭಗಳಲ್ಲಿಯೂ ಗರ್ಭಾವಸ್ಥೆಯ ಅಪಾಯ ಹೆಚ್ಚಿರುತ್ತದೆ.

ಪುರುಷರು ಕಾಂಡೋಮ್​ಗಳನ್ನು ಹೇಗೆ ಬಳಸಬೇಕು..?
ಕಾಂಡೋಮ್​​ಗಳನ್ನು ಆಯ್ಕೆ ಮಾಡುವ ಮುನ್ನ ಅವುಗಳ ಅಳತೆ ಹಾಗೂ ಗುಣಮಟ್ಟವನ್ನು ಮೊದಲು ಪರೀಕ್ಷೆ ಮಾಡಿಕೊಳ್ಳಿ.

ನೀವು ಸರಿಯಾಗಿ ಬಳಕೆ ಮಾಡಿದಲ್ಲಿ ಕಾಂಡೋಮ್​ಗಳು ಭಾಗಶಃ ಗರ್ಭಾವಸ್ಥೆಯ ಅಪಾಯವನ್ನು ತಡೆಯುತ್ತದೆ.

ಕಾಂಡೋಮ್​ಗಳನ್ನು ಬಳಕೆ ಮಾಡುವ ಮುನ್ನ ಅದರಲ್ಲಿ ರಂಧ್ರ ಇದೆಯೇ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಕಾಂಡೋಮ್​ ಶಿಶ್ನದ ಅಳತೆಗೆ ತಕ್ಕಂತೆ ಹಾಕಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...