alex Certify ಗರ್ಭ ಧರಿಸಿದ ಸಂದರ್ಭದಲ್ಲಿ ಶಾರೀರಿಕ ಸಂಬಂಧ ಎಷ್ಟು ಸೇಫ್..​…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭ ಧರಿಸಿದ ಸಂದರ್ಭದಲ್ಲಿ ಶಾರೀರಿಕ ಸಂಬಂಧ ಎಷ್ಟು ಸೇಫ್..​…? ಇಲ್ಲಿದೆ ಮಾಹಿತಿ

ಗರ್ಭ ಧರಿಸಿದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ ಎಂಬ ಗೊಂದಲ ಅನೇಕರಲ್ಲಿದೆ.

ನೈಸರ್ಗಿಕವಾಗಿ ಗರ್ಭ ಧರಿಸಿದವರು ತಮ್ಮ ಮೊದಲ ಮೂರು ತಿಂಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ಆದರೆ ಒಂದು ವೇಳೆ ನೀವು ಬೇರೆ ವೈದ್ಯಕೀಯ ವಿಧಾನಗಳ ಮೂಲಕ ಗರ್ಭ ಧರಿಸಿದ್ರೆ ಲೈಂಗಿಕ ಕ್ರಿಯೆ ಈ ಸಂದರ್ಭದಲ್ಲಿ ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಗರ್ಭದಲ್ಲಿರುವ ಮಗು ಗರ್ಭಾಶಯದ ವಿವಿಧ ಪದರಗಳಿಂದ ರಕ್ಷಿಸಲ್ಪಟ್ಟಿರುತ್ತದೆ. ಅಲ್ಲದೇ ಗರ್ಭದ ಸುತ್ತಲೂ ಇರುವ ಅಮ್ನಿಯೋಟಿಕ್​ ದ್ರವ ಮಗುಗೆ ರಕ್ಷಣೆ ನೀಡುತ್ತದೆ. ಗರ್ಭ ದ್ವಾರವು ಲೋಳೆಯ ಪ್ಲಗ್​ನಿಂದ ಮುಚ್ಚಲ್ಪಟ್ಟಿರೋದ್ರಿಂದ ಸೋಂಕಿನ ಭಯ ಇರೋದಿಲ್ಲ.

ಆದರೆ ಗರ್ಭವತಿಯಾದ ಸಂದರ್ಭದಲ್ಲಿ ನಿಮಗೆ ರಕ್ತಸ್ರಾವದ ಸಮಸ್ಯೆ ಕಂಡು ಬಂದಿದ್ದರೆ ಲೈಂಗಿಕ ಕ್ರಿಯೆ ಮಾಡಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಅಲ್ಲದೇ ಪತಿಗೆ ಜನನಾಂಗದ ಸೋಂಕು ಇದ್ದರೂ ಸಹ ಈ ಕ್ರಿಯೆಯಲ್ಲಿ ಭಾಗಿಯೋದು ಸೂಕ್ತವಲ್ಲ.

ಮೊದಲ ತ್ರೈಮಾಸಿಕ : ಗರ್ಭಿಣಿಯಾದ ಸಂದರ್ಭದಲ್ಲಿ ಮಹಿಳೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ಬದಲಾವಣೆಯನ್ನ ಹೊಂದುತ್ತಾ ಇರುತ್ತಾಳೆ. ಹೀಗಾಗಿ ಸಾಮಾನ್ಯವಾಗಿ ಮಹಿಳೆಯರು ಈ ಸಮಯದಲ್ಲಿ ಲೈಂಗಿಕ ಕ್ರಿಯೆಯನ್ನ ಇಷ್ಟ ಪಡೋದಿಲ್ಲ. ಅದರಲ್ಲೂ ಮೊದಲ ತ್ರೈಮಾಸಿಕದಲ್ಲಿ ವಾಂತಿ, ತಲೆ ಸುತ್ತುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಗರ್ಭಿಣಿ ಬಳಲುತ್ತಿರೋದ್ರಿಂದ ಆಕೆಗೆ ಸೆಕ್ಸ್ ವಿಚಾರದಲ್ಲಿ ಆಸಕ್ತಿ ಕಡಿಮೆ.

ಎರಡನೇ ತ್ರೈಮಾಸಿಕ : ಎರಡನೇ ತ್ರೈಮಾಸಿಕದಲ್ಲಿ ಬಹುತೇಕ ಮಹಿಳೆಯರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇರುತ್ತದೆ.

ಮೂರನೇ ತ್ರೈಮಾಸಿಕ : ಮೂರನೇ ತ್ರೈಮಾಸಿಕದಷ್ಟರ ಹೊತ್ತಿಗೆ ಮಹಿಳೆಯ ದೇಹದಲ್ಲಿ ತುಂಬಾನೇ ಬದಲಾವಣೆ ಉಂಟಾಗಿರುತ್ತೆ. ಅಲ್ಲದೇ ಅತಿಯಾದ ಬೆನ್ನುನೋವು ಹಾಗೂ ವಿವಿಧ ದೈಹಿಕ ಸಮಸ್ಯೆಯಿಂದ ಮಹಿಳೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ಬಗ್ಗೆ ಆಸಕ್ತಿ ಹೊಂದಿರೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...