alex Certify 5 ನೇ ಬ್ರೇಕ್ ಅಪ್….! ಎಂಗೇಜ್ ಮೆಂಟ್ ಮುರಿದುಕೊಂಡ 92 ವರ್ಷದ ರೂಪರ್ಟ್‌ ಮುರ್ಡೋಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ನೇ ಬ್ರೇಕ್ ಅಪ್….! ಎಂಗೇಜ್ ಮೆಂಟ್ ಮುರಿದುಕೊಂಡ 92 ವರ್ಷದ ರೂಪರ್ಟ್‌ ಮುರ್ಡೋಕ್

92 ವರ್ಷದ ಮಾಧ್ಯಮ ದೊರೆ ರೂಪರ್ಟ್ ಮುರ್ಡೋಕ್ ಅವರಿಗೆ ಇನ್ನು ಮದುವೆ ಭಾಗ್ಯ ಇಲ್ಲ ಎಂದೆನಿಸುತ್ತಿದೆ. ಶೀಘ್ರದಲ್ಲೇ 5ನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ನಡುವೆ ಅವರು ಸಿಂಗಲ್ ಆಗೇ ಉಳಿಯುವ ಲಕ್ಷಣಗಳು ಗೋಚರಿಸಿವೆ. ‌

ಆಸ್ಟ್ರೇಲಿಯಾ ಮೂಲದ ಅಮೆರಿಕಾ ಮಾಧ್ಯಮ ಲೋಕದ ದಿಗ್ಗಜ 92 ವರ್ಷದ ರೂಪರ್ಟ್ ಮುರ್ಡೋಕ್ ಅವರು 62 ವರ್ಷದ ಮಾಜಿ ನಿರೂಪಕಿ, ಮಾಜಿ ಮಾಡೆಲ್ ಆನ್ ಲೆಸ್ಲೆ ಸ್ಮಿತ್ ಅವರೊಂದಿಗಿನ ಸಂಬಂಧವನ್ನ ಮುರಿದುಕೊಂಡಿದ್ದಾರೆ. ಈ ಮೂಲಕ ಇಬ್ಬರ ಎಂಗೇಜ್ ಮೆಂಟ್ ಮುರಿದುಬಿದ್ದಿದೆ. ಜಾತಿಯ ಕಾರಣದಿಂದಾಗಿ ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂದು ತಿಳಿದುಬಂದಿದೆ.

ಮುರ್ಡೋಕ್ ತನ್ನ ನಾಲ್ಕನೇ ಪತ್ನಿ ಜೆರ್ರಿ ಹಾಲ್‌ಗೆ ವಿಚ್ಛೇದನ ನೀಡಿದ ತಿಂಗಳ ನಂತರ ಈ ಬೇಸಿಗೆಯಲ್ಲಿ ಮಾಜಿ ದಂತವೈದ್ಯೆಯನ್ನ ಮದುವೆಯಾಗಲು ನಿರ್ಧರಿಸಿದ್ದಾರೆನ್ನಲಾಗಿತ್ತು. ಅವರು ಮಾಜಿ ಮಾಡೆಲ್ ಕೈ ಬೆರಳಿಗೆ ಡೈಮಂಡ್ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದರು.

14 ವರ್ಷದಿಂದ ವಿಧವೆಯಾಗಿರುವ ಆನ್ ಲೆಸ್ಲೆ ಸ್ಮಿತ್ ಅವರಿಗೆ ರಿಂಗ್ ತೊಡಿಸಿ ಪ್ರಪೋಸ್ ಮಾಡಿದ್ದನ್ನ ಮುರ್ಡೋಕ್ ಒಪ್ಪಿಕೊಂಡಿದ್ದರು. ಆದರೆ ಈಗ ಸಂಬಂಧ ಮುರಿದುಬಿದ್ದಿದ್ದು, 92 ವರ್ಷ ವಯಸ್ಸಿನ ಮುರ್ಡೊಕ್ ಮತ್ತೊಮ್ಮೆ ಪ್ರೀತಿಯನ್ನು ಹುಡುಕುತ್ತಾರೋ ಅಥವಾ ಅವರು ತಮ್ಮ ವ್ಯವಹಾರದತ್ತ ಗಮನ ಹರಿಸುತ್ತಾರೋ ಕಾದು ನೋಡಬೇಕಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...