alex Certify 56 ವರ್ಷವಾದ್ರೂ ತನ್ನ ತಂದೆಯ ‌ʼಫಿಟ್ನೆಸ್ʼ ನೋಡಿ ಅಚ್ಚರಿಗೊಂಡ ಶಾರುಖ್ ಪುತ್ರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

56 ವರ್ಷವಾದ್ರೂ ತನ್ನ ತಂದೆಯ ‌ʼಫಿಟ್ನೆಸ್ʼ ನೋಡಿ ಅಚ್ಚರಿಗೊಂಡ ಶಾರುಖ್ ಪುತ್ರಿ..!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ತನ್ನ ತಂದೆಯ ಇತ್ತೀಚಿನ ಫೋಟೋ ಕಂಡು ವಿಸ್ಮಿತಗೊಂಡಿದ್ದಾರೆ. ಶಾರುಖ್ ರ ಎಂಟು ಪ್ಯಾಕ್ ದೇಹದ ಚಿತ್ರವನ್ನು ಸುಹಾನಾ ಹಂಚಿಕೊಂಡಿದ್ದಾರೆ.

ತನ್ನ ತಂದೆಯ ಫೋಟೋ ಹಂಚಿಕೊಂಡ ಸುಹಾನಾ ಖಾನ್, 56 ನೇ ವಯಸ್ಸಿನಲ್ಲಿ ಶಾರುಖ್ ಅವರಿಗೆ ಎಂಟು-ಪ್ಯಾಕ್ ಪಡೆಯಲು ಸಾಧ್ಯವಾದ ಬಗ್ಗೆ ಅವರು ಅಚ್ಚರಿಗೊಂಡಿದ್ದಾರೆ. 56ನೇ ವಯಸ್ಸಿನಲ್ಲೂ ಈ ರೀತಿಯ ದೇಹ ಪಡೆಯಲು ಸಾಧ್ಯವೇ…… ಎಂದು ಅವರು ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.

ಸುಹಾನಾ ಮಾತ್ರವಲ್ಲ, ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಕೂಡ ತನ್ನ ಪತಿಯ ಈ ನೋಟಕ್ಕೆ ಮನಸೋತಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಠಾಣ್ ಚಿತ್ರದ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಪಠಾಣ್ ಶಾರುಖ್ ಅವರ ಹೊಸ ಸಿನಿಮಾ. ಝೀರೋ ಸಿನಿಮಾದ ನಂತರ ಅವರು ಯಾವುದೇ ಸಿನಿಮಾವನ್ನು ಮಾಡಿರಲಿಲ್ಲ. ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿರುವ ಝೀರೋ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. 2018 ರ ಚಿತ್ರದ ನಂತರ ಶಾರುಕ್ ಯಾವುದೇ ಹೊಸ ಚಲನಚಿತ್ರವನ್ನು ಘೋಷಿಸಿರಲಿಲ್ಲ. ಇದೀಗ ಶಾರುಖ್ ಪಠಾಣ್ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...