alex Certify 50 ವರ್ಷಗಳಿಂದ ಡಿಎಲ್‌ ಇಲ್ಲದೇ ವಾಹನ ಚಲಾಯಿಸುತ್ತಿದ್ದ 70ರ ವೃದ್ಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ವರ್ಷಗಳಿಂದ ಡಿಎಲ್‌ ಇಲ್ಲದೇ ವಾಹನ ಚಲಾಯಿಸುತ್ತಿದ್ದ 70ರ ವೃದ್ಧ…!

ಬ್ರಿಟನ್ ನಲ್ಲಿ 70 ವರ್ಷದ ವ್ಯಕ್ತಿಯೊಬ್ಬ ಕಳೆದ 50 ವರ್ಷಗಳಿಂದ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ. ನಾಟಿಂಗ್‌ಹ್ಯಾಮ್‌ಶೈರ್‌ನ ಬುಲ್‌ವೆಲ್‌ನಲ್ಲಿರುವ ಟೆಸ್ಕೊ ಎಕ್ಸ್‌ಟ್ರಾ ಸ್ಟೋರ್ ಬಳಿ ಪೊಲೀಸರು ಈ ವೃದ್ಧನನ್ನು ಸೆರೆಹಿಡಿದಿದ್ದಾರೆ.

ನಾಟಿಂಗ್‌ಹ್ಯಾಮ್‌ಶೈರ್ ಪೊಲೀಸರೇ ನೀಡಿರೋ ಮಾಹಿತಿ ಪ್ರಕಾರ ಈತ 12 ವರ್ಷದ ಬಾಲಕನಾಗಿದ್ದಾಗಿನಿಂದ್ಲೇ ಡ್ರೈವಿಂಗ್‌ ಲೈಸನ್ಸ್‌ ಹಾಗೂ ಇನ್ಷೂರೆನ್ಸ್‌ ಇಲ್ಲದೆ ವಾಹನ ಚಲಾಯಿಸಲು ಆರಂಭಿಸಿದ್ದ.

50 ವರ್ಷಗಳ ಕಾಲ ಡಿಎಲ್‌ ಇಲ್ಲದೆ ಗಾಡಿ ಓಡಿಸಿದ್ರೂ ಆತ ಒಮ್ಮೆಯೂ ಸಿಕ್ಕಿಬಿದ್ದಿರಲಿಲ್ಲ. ಅಪ್ರಾಪ್ತನಾಗಿದ್ದಾಗ್ಲೇ ವಾಹನ ಚಲಾಯಿಸಲು ಆರಂಭಿಸಿದ್ದ ಈ ವ್ಯಕ್ತಿ, ಲೈಸನ್ಸ್‌ ಪಡೆಯಲು ಅರ್ಹನಾದ ವಯಸ್ಸಿಗೆ ಬಂದ ಮೇಲೂ ಡಿಎಲ್‌ ಮಾಡಿಸುವ ಗೊಡವೆಗೆ ಹೋಗಲೇ ಇಲ್ಲ. 1935ರಲ್ಲೇ ಬ್ರಿಟನ್‌ ನಲ್ಲಿ ಎಲ್ಲಾ ವಾಹನ ಚಾಲಕರಿಗೆ ಕಡ್ಡಾಯ ಪರೀಕ್ಷೆಯನ್ನು ಜಾರಿಗೆ ತರಲಾಗಿದೆ. ಆದರೂ ಈತ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಬಿಂದಾಸ್‌ ಆಗಿ 50 ವರ್ಷ ಕಾರು ಚಲಾಯಿಸಿದ್ದಾನೆ.

ಬ್ರಿಟನ್‌ ನಲ್ಲಿ ಡ್ರೈವಿಂಗ್‌ ಲೈಸನ್ಸ್‌ ಹಾಗೂ ಇನ್ಷೂರೆನ್ಸ್‌ ಇಲ್ಲದೆ ವಾಹನ ಚಲಾಯಿಸಿದ್ರೆ ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಅಂಥದ್ರಲ್ಲಿ 5 ದಶಕಗಳ ಕಾಲ ಪರವಾನಿಗಿಯೇ ಇಲ್ಲದೆ ಕಾರು ಚಲಾಯಿಸಿದ ಈ ಭೂಪ ಹೊಸ ದಾಖಲೆಯನ್ನೇ ಮಾಡಿದ್ದಾನೆ ಅಂತಾ ಜಾಲತಾಣಗಳಲ್ಲಿ ಕಮೆಂಟ್‌ ಗಳು ಹರಿದಾಡ್ತಾ ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...