alex Certify Shocking: ಅತ್ಯಾಚಾರವೆಸಗಿದವನಿಗೆ ಬಸ್ಕಿ ಹೊಡೆಸಿ ಬಿಟ್ಟು ಕಳುಹಿಸಿದ ಪಂಚಾಯಿತಿ ಮುಖಂಡರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಅತ್ಯಾಚಾರವೆಸಗಿದವನಿಗೆ ಬಸ್ಕಿ ಹೊಡೆಸಿ ಬಿಟ್ಟು ಕಳುಹಿಸಿದ ಪಂಚಾಯಿತಿ ಮುಖಂಡರು

ಬಿಹಾರ್: ಕಾನೂನು ಇಷ್ಟು ಮುಂದುವರೆದಿದ್ದರೂ, ಕಠಿಣ ಶಿಕ್ಷೆಗಳು ಕಣ್ಣ ಮುಂದೆ ಇದ್ದರೂ ಅಪ್ರಾಪ್ತರ ಮೇಲೆ ಅತ್ಯಾಚಾರಗಳು ಮಾತ್ರ ನಿಂತಿಲ್ಲ. ಇಂಥವರಿಗೆ ಕಠಿಣ ಶಿಕ್ಷೆ ನೀಡಬೇಕಾದ ಸಮಾಜ ಬಸ್ಕಿ ಹೊಡೆಸುವ ಮೂಲಕ ಅಂತವರನ್ನು ಮತ್ತೆ ಸಮಾಜದಲ್ಲಿ ಓಡಾಡಲು ಅವಕಾಶ ಕೊಡ್ತಾ ಇರೋದು ನಾಚಿಕೆಗೇಡಿನ ಸಂಗತಿ.

ಹೌದು, 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕನನ್ನು ಆ ಮಗುವಿನ ಪೋಷಕರು ಪಂಚಾಯಿತಿಯ ಮುಂದೆ ತಂದು ನಿಲ್ಲಿಸಿ, ಶಿಕ್ಷೆ ಕೊಡಿಸಿ ಎಂದು ಊರಿನ ಮುಂದೆ ಹೇಳಿದಾಗ ಪಂಚಾಯಿತಿ ಮಾಡುವ ದೊಡ್ಡ ಮನುಷ್ಯರು, ಊರಿನವರ ಮುಂದೆ ಆ ವ್ಯಕ್ತಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಈ ಘಟನೆ ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದಿದೆ.

ಮಗುವಿಗೆ ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ ಮಾಡಿದ್ದಾನೆ ಕಾಮುಕ. ಪೊಲೀಸರಿಗೆ ದೂರು ನೀಡಿದರೆ ಊರಿನ ಮರ್ಯಾದೆ ಹೋಗುತ್ತೆ ಅಂತ ಆತನಿಗೆ ಬಸ್ಕಿ ಶಿಕ್ಷೆ ಕೊಟ್ಟಿದ್ದಾರೆ ಈ ಊರಿನ ಪಂಚಾಯತಿಯವರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದ್ದಂತೆ ಬಿಹಾರ್ ಸಿಎಂಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸುದ್ದಿ ವೈರಲ್ ಆಗ್ತಾ ಇದ್ದಂತೆ ಅಲ್ಲಿನ ಎಸ್ ಪಿ ಗೌರವ್ ಮಂಗ್ಲ ಎಫ್ ಐ ಆರ್ ದಾಖಲು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...