alex Certify 35 ದಿನಗಳಲ್ಲಿ 44 ಹೊಸ ವಿಮಾನ..! ಮಧ್ಯಪ್ರದೇಶಕ್ಕೆ ಭರ್ಜರಿ ಗಿಫ್ಟ್​ ನೀಡಿದ ಸಿಂಧಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

35 ದಿನಗಳಲ್ಲಿ 44 ಹೊಸ ವಿಮಾನ..! ಮಧ್ಯಪ್ರದೇಶಕ್ಕೆ ಭರ್ಜರಿ ಗಿಫ್ಟ್​ ನೀಡಿದ ಸಿಂಧಿಯಾ

ಕಳೆದ 35 ದಿನಗಳಲ್ಲಿ ಮಧ್ಯಪ್ರದೇಶದಲ್ಲಿ 44 ಹೊಸ ವಿಮಾನಗಳು ಪ್ರಯಾಣ ಆರಂಭಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಬುಧವಾರ ವಿಮಾನಗಳು ಜಬಲಾಪುರದಿಂದ ಮುಂಬೈ, ಪುಣೆ, ಸೂರ್​, ಹೈದರಬಾದ್​ ಹಾಗೂ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿವೆ. ಆಗಸ್ಟ್​ 20ರಿಂದ ಜಬಲಾಪುರದಿಂದ ವಿಮಾನಗಳು ದೆಹಲಿ ಹಾಗೂ ಇಂದೋರ್​ಗೆ ಹಾರಾಟ ಆರಂಭಿಸಲಿದೆ ಎಂದು ಸಿಂಧಿಯಾ ಹೇಳಿದ್ದಾರೆ.

ಈ ವಿಮಾನಗಳಲ್ಲಿ 8 ವಿಮಾನಗಳು ಉಡಾನ್​ ಯೋಜನೆಯ ಅಡಿಯಲ್ಲಿ ಬರುತ್ತದೆ ಎಂದು ಸಿಂಧಿಯಾ ಈ ಮೊದಲೇ ಹೇಳಿದ್ದರು. ಇದು ಸಣ್ಣ ವಿಮಾನ ನಿಲ್ದಾಣಗಳು, ಮಹಾನಗರಗಳನ್ನು ಸಂಪರ್ಕಿಸುವತ್ತ ಹೆಚ್ಚಿನ ಆದ್ಯತೆ ನೀಡುತ್ತದೆ. ಉಡಾನ್​ ಯೋಜನೆಯ ಅಡಿಯಲ್ಲಿ 100 ವಿಮಾನನಿಲ್ದಾಣಗಳನ್ನು ಕಾರ್ಯಗತಗೊಳಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ ಎಂದು ಹರ್ದಿಪ್​ ಪುರಿ ಹೇಳಿದ್ದರು.

19 ವರ್ಷಗಳ ಕಾಲ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಕಳೆದ ವರ್ಷ ಮಾರ್ಚ್​ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಕಳೆದ ತಿಂಗಳು ಮೋದಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿಯೂ ಸಿಂಧಿಯಾ ಯಶಸ್ವಿಯಾಗಿದ್ದಾರೆ.

ಇಂದೋರ್​​ ಪ್ರವಾಸ ಕೈಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧಿಯಾ, ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತದ ವಿಮಾನಯಾನ ಸೇವೆಯನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯುವುದೇ ನನ್ನ ಗುರಿಯಾಗಿದೆ ಎಂದು ಹೇಳಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...