alex Certify ರೀಲ್ಸ್​ ಹುಚ್ಚಿಗೆ ಕೆಲಸ ಕಳೆದುಕೊಂಡ ನಾಲ್ವರು ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ಗಳು! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೀಲ್ಸ್​ ಹುಚ್ಚಿಗೆ ಕೆಲಸ ಕಳೆದುಕೊಂಡ ನಾಲ್ವರು ಮಹಿಳಾ ಪೊಲೀಸ್​ ಕಾನ್ಸ್​ಟೆಬಲ್​ಗಳು!

ರೀಲ್ಸ್​ ಹುಚ್ಚು ಬಹುತೇಕ ಯಾರನ್ನೂ ಬಿಟ್ಟಿಲ್ಲ. ಆದರೆ ಯಾವಾಗ, ಯಾವ ಸಮಯದಲ್ಲಿ ರೀಲ್ಸ್​ ಮಾಡಬೇಕು ಎಂಬ ಅರಿವು ಇರಬೇಕು. ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಉತ್ತರ ಪ್ರದೇಶದ ಅಯೋಧ್ಯೆಯ ರಾಮಜನ್ಮಭೂಮಿ ಸೈಟ್‌ನಲ್ಲಿ ಭದ್ರತೆಯ ಭಾಗವಾಗಿ ನಿಯೋಜಿಸಲಾದ ನಾಲ್ವರು ಮಹಿಳಾ ಪೊಲೀಸ್ ಕಾನ್ಸ್​ಸ್ಟೆಬಲ್​ಗಳು ಭೋಜ್‌ಪುರಿ ಹಾಡಿನ ‘ಪಾಟ್ಲಿ ಕಮಾರಿಯಾ ಮೋರಿ’ಗೆ ನೃತ್ಯ ಮಾಡಿದ್ದು, ಅವರನ್ನು ಅಮಾನತು ಮಾಡಲಾಗಿದೆ.

ಇವರು ಮಾಡಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಇವರನ್ನು ಅಮಾನತುಗೊಳಿಸಲಾಗಿದೆ.
ವಿಡಿಯೋ ಪ್ರಕಾರ ಮಹಿಳಾ ಕಾನ್ಸ್​ಟೆಬಲ್​ಗಳು ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ. ಅವರಲ್ಲಿ ಇಬ್ಬರು ಕುಳಿತಿರುವುದನ್ನು ನೋಡಬಹುದಾದರೆ, ಮೂರನೇ ಕಾನ್‌ಸ್ಟೆಬಲ್ ನೃತ್ಯ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊದಲ್ಲಿ ಅಮಾನತುಗೊಂಡಿರುವ ಕಾನ್‌ಸ್ಟೆಬಲ್‌ಗಳು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮುನಿರಾಜ್ ಜಿ ಅವರು ಗುರುವಾರ ಹೆಚ್ಚುವರಿ ಎಸ್‌ಪಿ (ಭದ್ರತೆ) ಪಂಕಜ್ ಪಾಂಡೆ ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಕಾನ್‌ಸ್ಟೆಬಲ್‌ಗಳಾದ ಕವಿತಾ ಪಟೇಲ್, ಕಾಮಿನಿ ಕುಶ್ವಾಹಾ, ಕಾಶಿಶ್ ಸಾಹ್ನಿ ಮತ್ತು ಸಂಧ್ಯಾ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...