alex Certify 30 ವರ್ಷ ದಾಟುತ್ತಿದ್ದಂತೆ ಈ ತಿನಿಸುಗಳಿಂದ ದೂರವಿರಿ, ಇಲ್ಲದಿದ್ದರೆ ಹರೆಯದಲ್ಲೇ ಬರಬಹುದು ‘ವೃದ್ಧಾಪ್ಯ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷ ದಾಟುತ್ತಿದ್ದಂತೆ ಈ ತಿನಿಸುಗಳಿಂದ ದೂರವಿರಿ, ಇಲ್ಲದಿದ್ದರೆ ಹರೆಯದಲ್ಲೇ ಬರಬಹುದು ‘ವೃದ್ಧಾಪ್ಯ’

ವಯಸ್ಸು ಹೆಚ್ಚಾದಂತೆ ನಮ್ಮ ದೇಹದ ಅಗತ್ಯಗಳು ಬದಲಾಗುತ್ತವೆ. ಯಾವಾಗ ವಯಸ್ಸು 30 ದಾಟುತ್ತದೆಯೋ ಆಗ ನಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅಪಾಯಕಾರಿ ಕಾಯಿಲೆಗಳನ್ನು ಎದುರಿಸಲು ಪ್ರಾರಂಭಿಸುತ್ತೇವೆ.  30ರ ಹೆರಯದಲ್ಲೇ ವೃದ್ಧಾಪ್ಯ ಬಂದುಬಿಡುತ್ತದೆ. ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ.

ಸುಸ್ತು, ಕೀಲು ನೋವು, ಮೈಕೈ ನೋವು ಹೀಗೆ ಹಲವಾರು ಸಮಸ್ಯೆಗಳು ಬರಬಹುದು. ಈ ವಯಸ್ಸಿನಲ್ಲಿ ದೇಹವು ದುರ್ಬಲವಾಗದಂತೆ ನೋಡಿಕೊಳ್ಳಲು ಸರಿಯಾದ ಆಹಾರವನ್ನು ತೆಗೆದುಕೊಳ್ಳಬೇಕು. ಅಷ್ಟೇ ಅಲ್ಲ 30 ವರ್ಷ ದಾಟುತ್ತಿದ್ದಂತೆ ಕೆಲವು ತಿನಿಸುಗಳನ್ನು ದೂರವಿಡಬೇಕು. ಅವು ಯಾವುವು ಅನ್ನೋದನ್ನು ನೋಡೋಣ.  

ಆಲೂಗಡ್ಡೆ ಚಿಪ್ಸ್: ಆಲೂಗೆಡ್ಡೆ ಚಿಪ್ಸ್ ರುಚಿ ಎಲ್ಲಾ ವಯಸ್ಸಿನವರಿಗೂ ಇಷ್ಟ. ಪ್ರಪಂಚದಾದ್ಯಂತದ ಉದ್ಯಮಿಗಳು ಚಿಪ್ಸ್ ವ್ಯವಹಾರದ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಈ ಆಹಾರವು ಎಷ್ಟೇ ಜನಪ್ರಿಯವಾಗಿದ್ದರೂ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು 30 ವರ್ಷವನ್ನು ದಾಟಿದ್ದರೆ ಆಲೂ ಚಿಪ್ಸ್‌ ತಿನ್ನಬೇಡಿ. ಏಕೆಂದರೆ ಚಿಪ್ಸ್ ತಯಾರಿಸಲು ಸಿಂಥೆಟಿಕ್ ವಸ್ತುಗಳನ್ನು ಸೇರಿಸಲಾಗುತ್ತದೆ, ಇದರಿಂದ ಅದರ ರುಚಿ ಹೆಚ್ಚಿಸಬಹುದು. ಜೊತೆಗೆ ಆಲೂಗಡ್ಡೆ ಚಿಪ್ಸ್‌ನಲ್ಲಿ ಸೋಡಿಯಂ ಅಂಶವು ತುಂಬಾ ಹೆಚ್ಚಾಗಿರುತ್ತದೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

ಸುವಾಸನೆಯ ಮೊಸರು : ಮೊಸರು ತಿನ್ನುವುದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಇದು ದೇಹವನ್ನು ತಂಪಾಗಿಸುವುದಲ್ಲದೆ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ.  ಆದರೆ 30 ವರ್ಷ ದಾಟಿದ ಬಳಿಕ ಮಾರುಕಟ್ಟೆಯಲ್ಲಿ ಸಿಗುವ ಫ್ಲೇವರ್ಡ್‌ ಮೊಸರಿನಿಂದ ದೂರವಿರಿ. ಇದರಲ್ಲಿ ಹೆಚ್ಚಿನ ಸಕ್ಕರೆ ಅಂಶವಿರುತ್ತದೆ. ಇದರಿಂದಾಗಿ ಮಧುಮೇಹ ಮತ್ತು ಸ್ಥೂಲಕಾಯತೆಯ ಅಪಾಯವು ಹೆಚ್ಚಾಗುತ್ತದೆ.

ಪಾಪ್ ಕಾರ್ನ್ ; ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ನೋಡುವಾಗ, ಮನೆಯಲ್ಲಿ ಟಿವಿ ಮುಂದೆ ಕುಳಿತಾಗ ಪಾಪ್‌ಕಾರ್ನ್ ತಿನ್ನಲು ಇಷ್ಟಪಡುತ್ತೇವೆ. ಆರೋಗ್ಯಕರ ರೀತಿಯಲ್ಲಿ ತಯಾರಿಸಿದರೆ ಅದು ಆರೋಗ್ಯಕರವಾಗಿರುತ್ತದೆ. ಆದರೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಅದನ್ನು ತಯಾರಿಸಲು ಬಹಳಷ್ಟು ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಬಳಸಲಾಗುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...