alex Certify 3 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ಪುಟ್ಟ ಬಾಲೆಯ ನೃತ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ಪುಟ್ಟ ಬಾಲೆಯ ನೃತ್ಯ..!

3-yr-old girl steals the show with her expressions while dancing to Manike  Mage Hithe. Viral video - Trending News Newsಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರ ‘ಮನಿಕೆ ಮಗೆ ಹಿತೆ’ ವೈರಲ್ ಹಾಡಿನ ಕ್ರೇಜ್ ಇನ್ನೂ ಕೂಡ ಕಡಿಮೆಯಾದಂತಿಲ್ಲ. ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದರೂ ಕೂಡ ಈ ಹಾಡು ಭಾರತೀಯರನ್ನು ವಿಶೇಷವಾಗಿ ಆಕರ್ಷಿಸಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಹಾಡಿಗೆ ಡ್ಯಾನ್ಸ್ ಮಾಡಿದವರಿದ್ದಾರೆ.

ಇದೀಗ ಮೂರು ವರ್ಷದ ಬಾಲಕಿಯೊಬ್ಬಳು ಈ ಹಾಡಿಗೆ ಸ್ಟೆಪ್ ಹಾಕಿರುವ ವಿಡಿಯೋ ಆನ್ಲೈನ್ ನಲ್ಲಿ ವೈರಲ್ ಆಗಿದೆ. ಬಾಲಕಿಯನ್ನು ರಾಸ್ಭಾರಿ ತನೇಜಾ ಎಂದು ಗುರುತಿಸಲಾಗಿದೆ. ಈಕೆ ಇನ್ಸ್ಟಾಗ್ರಾಂನಲ್ಲಿ 5.5 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾಳೆ.

ಪುಟ್ಟ ಬಾಲೆ ರಾಸ್‌ಭಾರಿ ತನ್ನ ತಲೆಗೆ ಹೇರ್‌ಬ್ಯಾಂಡ್‌ ಅನ್ನು ಹಾಕಿದ್ದು, ಬಿಳಿ ಬಣ್ಣದ ಉಡುಪು ಧರಿಸಿ ಬಹಳ ಮುದ್ದಾಗಿ ಕಾಣುತ್ತಿದ್ದಾಳೆ. ಅವಳು ಉತ್ಸಾಹದಿಂದ ಮನಿಕೆ ಮಗೆ ಹಿತೆಗೆ ಕುಣಿದಿದ್ದಾಳೆ. ಆಕೆಯ ಹೆಜ್ಜೆಗಳು ಸೊಗಸಾಗಿದ್ದರೂ, ಬಾಲೆಯ ಚಮತ್ಕಾರಿ ಹುಬ್ಬು ಚಲನೆ ನೆಟ್ಟಿಗರನ್ನು ಆಕರ್ಷಿಸಿದೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಂತರ, ಈ ವಿಡಿಯೋ 3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಪುಟ್ಟ ಬಾಲಕಿಯ ಅದ್ಭುತ ಕೌಶಲ್ಯಕ್ಕೆ ನೆಟ್ಟಿಗರು ಬೌಲ್ಡ್ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...