alex Certify ಸೆಲ್ಫಿ ಕ್ಲಿಕ್ಕಿಸುವಾಗಲೇ ಬಡಿದ ಸಿಡಿಲು: ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿ ಕ್ಲಿಕ್ಕಿಸುವಾಗಲೇ ಬಡಿದ ಸಿಡಿಲು: ಕ್ಯಾಮರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಲಂಡನ್: ಭಾರಿ ಮಳೆಯ ಮಧ್ಯೆ ಮರದ ಕೆಳಗೆ ಮೂವರು ಸೆಲ್ಫಿ ಕ್ಲಿಕ್ಕಿಸುತ್ತಿರಬೇಕಾದರೆ ಏಕಾಏಕಿ ಸಿಡಿಲು ಬಡಿದಿರುವ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ನೈರುತ್ಯ ಲಂಡನ್ ನ ಹ್ಯಾಂಪ್ಟನ್ ಕೋರ್ಟ್ ಪ್ಯಾಲೇಸ್ ಬಳಿ ಈ ಘಟನೆ ನಡೆದಿದೆ. ರಾಚೆಲ್, ಐಸೋಬೆಲ್ ಹಾಗೂ ಆಂಡ್ರ್ಯೂ ಜಾಬ್ಸನ್ ಎಂಬ ಒಡಹುಟ್ಟಿದವರು, ಸಂಜೆ 5 ಗಂಟೆ ವೇಳೆಗೆ ಸೈಕಲ್ ಸವಾರಿ ಮಾಡುತ್ತಿದ್ದರು.

ಈ ವೇಳೆ ಭಾರಿ ಮಳೆ ಸುರಿದಿದೆ. ಇವರು ಮೂವರೂ ಮರದ ಕೆಳಗೆ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಏಕಾಏಕಿ ಮರಕ್ಕೆ ಸಿಡಿಲು ಹೊಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಿಂಗ ತಾರತಮ್ಯದ ಕಮೆಂಟ್ ಮಾಡಿ ವಿವಾದಕ್ಕೀಡಾದ ಪಾಕ್ ಮಾಜಿ ಕ್ರಿಕೆಟರ್‌

ಈ ಮೂವರು ಫೋಟೋ ಕ್ಲಿಕ್ಕಿಸುತ್ತಿದ್ದಾಗಲೇ ಮಿಂಚು ಹೊಡೆದಿದ್ದು, ಈ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಮೂವರೂ ಕೂಡ ಗಾಯಗೊಂಡಿದ್ದು, ಇವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಲಂಡನ್ ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ತಿಂಗಳು ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿದ ಪರಿಣಾಮ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

 

Siblings struck by lightning| 3 siblings struck by lightning as they took  selfie under tree, terrifying moment captured on camera | Trending & Viral  News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...