alex Certify ಬಿಹಾರ ಪೊಲೀಸ್‌ ಡಿಎಸ್‌ಪಿಯಾಗಿ ಇತಿಹಾಸ ಬರೆದ ರಜಿಯಾ ಸುಲ್ತಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರ ಪೊಲೀಸ್‌ ಡಿಎಸ್‌ಪಿಯಾಗಿ ಇತಿಹಾಸ ಬರೆದ ರಜಿಯಾ ಸುಲ್ತಾನ್

27-year-old Razia Sultan from Gopalganj is Bihar Police's First Female Muslim DSP

ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದ 27 ವರ್ಷ ವಯಸ್ಸಿನ ರಜಿಯಾ ಸುಲ್ತಾನ್, ಡಿಎಸ್‌ಪಿ ಆಗಿ ನೇಮಕಗೊಂಡ ಬಿಹಾರದ ಮೊದಲ ಮುಸ್ಲಿಂ ಮಹಿಳೆ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ರಜಿಯಾ ಸುಲ್ತಾನ್, ಬಿಹಾರ ಪೊಲೀಸ್‌ಗೆ ಆಯ್ಕೆಗೊಂಡ 40 ಹೊಸ ಡಿಎಸ್‌ಪಿಗಳಲ್ಲಿ ಒಬ್ಬರಾಗಿದ್ದಾರೆ.

ಬ್ಲಾಕ್‌ ಫಂಗಸ್:‌ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಡಾ. ರಾಜು ನೀಡಿದ್ದಾರೆ ಉತ್ತರ

ಸದ್ಯದ ಮಟ್ಟಿಗೆ ಬಿಹಾರ ಸರ್ಕಾರದ ವಿದ್ಯತ್‌ ಇಲಾಖೆಯ ಸಹಾಯಕ ಇಂಜಿನಿಯರ್‌ ಆಗಿ ರಜಿಯಾ ಕೆಲಸದಲ್ಲಿದ್ದಾರೆ.

ರಜಿಯಾ ಕುಟುಂಬದಲ್ಲಿ ಆಕೆಯ ತಾಯಿ ಅಲ್ಲದೇ ಜೊತೆಯಲ್ಲಿ ಹುಟ್ಟಿದ 5 ಮಂದಿ ಇದ್ದಾರೆ. ಬೊಕಾರೋ ಉಕ್ಕು ಘಟಕದಲ್ಲಿ ಕೆಲಸ ಮಾಡುತ್ತಿದ್ದ ರಜಿಯಾ ತಂದೆ 2016ರಲ್ಲಿ ನಿಧನರಾಗಿದ್ದರು.

ಕಳವು ಮಾಡಲಾಗಿದ್ದ ಪುರಾತನ ಹಿಂದೂ ಕಲಾಕೃತಿಗಳನ್ನ ಹಿಂದಿರುಗಿಸಿದ ಅಮೆರಿಕ

ಬೊಕಾರೋದಲ್ಲಿ ಶಾಲಾ ವ್ಯಾಸಂಗ ಮುಗಿಸಿದ ರಜಿಯಾ ಅವರ ಕುಟುಂಬ ಈಗಲೂ ಅಲ್ಲೇ ನೆಲೆಸಿದೆ. ಏಳು ಒಡಹುಟ್ಟಿದವರ ಪೈಕಿ ಅತ್ಯಂತ ಕಿರಿಯಳಾದ ರಜಿಯಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...