alex Certify ಸೆಲ್ಫೀ ಹುಚ್ಚಿಗೆ ಹಾರಿ ಹೋಯ್ತು ಯುವತಿ ಪ್ರಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫೀ ಹುಚ್ಚಿಗೆ ಹಾರಿ ಹೋಯ್ತು ಯುವತಿ ಪ್ರಾಣ

ಸೆಲ್ಫೀ ಗೀಳಿನ ವೈಪರಿತ್ಯದ ನಿದರ್ಶನವೊಂದರಲ್ಲಿ, ಟರ್ಕಿಯ 21 ವರ್ಷ ವರ್ಷದ ಮಹಿಳೆಯೊಬ್ಬರು ಸೆಲ್ಫೀ ತೆಗೆಯವ ವೇಳೆ 164 ಅಡಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಹಟಿಸ್ ನೂರ್‌ ಕರಾಬುಲುಟ್ ಹೆಸರಿನ ಈ ಮಹಿಳೆಗೆ ಸೆಲ್ಫೀ ತೆಗೆಯುತ್ತಿದ್ದ ಸಂದರ್ಭ ಕಾಲು ಜಾರಿ ಈ ಅವಘಡ ಸಂಭವಿಸಿದೆ. ತನ್ನಿಚ್ಛೆಯಂತೆಯೇ ಸೆಲ್ಫೀ ಬರಬೇಕೆನ್ನುವನ ಹುಚ್ಚು ಹಟದಿಂದ ಹಟಿಸ್ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಎದೆ ನಡುಗಿಸುತ್ತೆ ಸೈನಿಕರು ಮಾಡಿರುವ ಸಾಹಸದ ವಿಡಿಯೋ

ಟರ್ಕಿಯ ಅಡಾನಾ ಪ್ರಾಂತ್ಯದಲ್ಲಿ ಈ ಘಟನೆ ಜರುಗಿದೆ. ಇಲ್ಲಿನ ಕರಾಯ್ಸಿಲಿ ಜಿಲ್ಲೆಯ ಹಸಿಕಿರಿ ಎಂಬ ಊರಿನಲ್ಲಿ ಈ ಘಟನೆ ಜರುಗಿದೆ. ತನ್ನ ಸಹೋದರಿ ಮಜ್ಲುಂ ಸೊಜ಼ೇರಿಯೊಂದಿಗೆ ಪ್ರಖ್ಯಾತ ವಾರ್ದಾ ಸ್ಥಂಬದವನ್ನು ಸೆಲ್ಫೀಯಲ್ಲಿ ಕವರ್‌ ಮಾಡಲು ಹೋದ ವೇಳೆ ಈ ಅನಾಹುತ ಸಂಭವಿಸಿದೆ.

ತನ್ನ ಸಹೋದರಿ ಹಾಟಿಸ್‌ಳನ್ನು ರಕ್ಷಿಸುವ ಯುತ್ನದಲ್ಲಿ ಮಜ್ಲೂಂ ಸಹ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗಳನ್ನು ಮಾಡಿಕೊಂಡಿದ್ದಾರೆ. ರಕ್ಷಣಾ ಕಾರ್ಯಕರ್ತರು ಹಾಟಿಸ್‌ಳ ಸಹೋದರಿಯನ್ನು ರಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...