alex Certify ಆಗಸ್ಟ್ 30 ರಂದು ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ; ಇದರ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 30 ರಂದು ಬಹುನಿರೀಕ್ಷಿತ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಿಡುಗಡೆ; ಇದರ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದ ರಾಯಲ್ ಎನ್‌ಫೀಲ್ಡ್ ಪ್ರೇಮಿಗಳಿಗೆ ಅಂತೂ ಶುಭ ಸಿಕ್ಕಿದೆ. ಬಹು ನಿರೀಕ್ಷಿತ 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಆಗಸ್ಟ್ 30 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ತಲೆಮಾರಿನ ಮೋಟಾರ್‌ಸೈಕಲ್ 350ಸಿಸಿ ಎಂಜಿನ್‌ಗಳೊಂದಿಗೆ ರಾಯಲ್ ಎನ್‌ಫೀಲ್ಡ್‌ನ ಕೋರ್ ಪ್ಲಾಟ್‌ಫಾರ್ಮ್ ನವೀಕರಣವಾಗಿದೆ.

2023 ಬುಲೆಟ್ 350, 19 ಬಿ ಎಚ್ ಪಿ ಮತ್ತು 28 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ 346ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಈಗಾಗಲೇ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಮತ್ತು ರಾಯಲ್ ಎನ್‌ಫೀಲ್ಡ್ ಹಂಟರ್ 350 ನಲ್ಲಿ ಬಳಸುತ್ತಿರುವ ಜೆ-ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಅಲ್ಲದೆ, ಇದು ಕಿಕ್ ಸ್ಟಾರ್ಟ್ (ಕೆಎಸ್) ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ (ಇಎಸ್) ರೂಪಾಂತರಗಳಲ್ಲಿ ಬರಲಿದೆ ಎನ್ನಲಾಗಿದೆ.

2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಹೊಸ ವೈಶಿಷ್ಟ್ಯಗಳು:

2023 ಬುಲೆಟ್ 350 ಸಿಂಗಲ್ ಪೀಸ್ ಸೀಟ್ (ಒಂದೇ ಆಸನ), ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಮತ್ತು ಹೊಸ ಸ್ವಿಚ್‌ಗಿಯರ್ ಅನ್ನು ಒಳಗೊಂಡಿರುತ್ತದೆ. ಹೊಸ ಬುಲೆಟ್ 350ನಲ್ಲಿನ ಗಮನಾರ್ಹ ಸುಧಾರಣೆಗಳನ್ನು ಮಾಡಲಾಗಿದೆ. ಬೈಕಿನ ಫಿಟ್ ಮತ್ತು ಫಿನಿಶ್ (ಅಂತಿಮ ರೂಪ) ಕೂಡ ಅದ್ಭುತವಾಗಿ ಮೂಡಿಬಂದಿದೆ. ಈ ಬೈಕ್ ನೋಡಲು ಹಳೆಯ ರಾಯಲ್ ಎನ್ ಫೀಲ್ಡ್ ಮೋಟಾರ್ ಸೈಕಲ್ ನಂತೆಯೇ ಇರಲಿದೆ. 38kmpl ಮೈಲೇಜ್ ನೀಡುವ ನಿರೀಕ್ಷೆಯಿದೆ.

ಬುಲೆಟ್ ಮುಂಭಾಗದಲ್ಲಿ ಮತ್ತು ಟೆಲಿಸ್ಕೋಪಿಕ್ ಸಸ್ಪೆನ್ಶನ್ ಅಥವಾ ಅಬ್ಸರ್ವರ್ ಎರಡು ಇರಲಿದೆ. ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 153 ಎಂಎಂ ಡ್ರಮ್ ಇರಲಿದೆ. ಮೋಟಾರ್‌ಸೈಕಲ್ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಹೊಂದಿರುತ್ತದೆ. ಅಂದಹಾಗೆ, 2023 ಬುಲೆಟ್ 350 ಬೆಲೆಯು ರೂ. 1.95 ಲಕ್ಷದಿಂದ ಪ್ರಾರಂಭವಾಗಲಿದೆ (ಎಕ್ಸ್ ಶೋ ರೂಂ).

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...