alex Certify ಏರ್‌ ಬ್ಯಾಗ್, ಎಸಿ ಹೊಂದಿದ ದ್ವಿಚಕ್ರವಾಹನ ಭಾರತದ ಮಾರುಕಟ್ಟೆ ಪ್ರವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್‌ ಬ್ಯಾಗ್, ಎಸಿ ಹೊಂದಿದ ದ್ವಿಚಕ್ರವಾಹನ ಭಾರತದ ಮಾರುಕಟ್ಟೆ ಪ್ರವೇಶ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ದ್ವಿಚಕ್ರವಾಹನ ಬಿಡುಗಡೆ ಮಾಡಿದೆ.

2022ರ ಗೋಲ್ಡ್ ವಿಂಗ್ ಟೂರ್ 39,20,000 ರೂ. (ಎಕ್ಸ್ ಶೋ ರೂಂ ಬೆಲೆ ) ಲಭ್ಯವಿದ್ದು, ಗನ್‌ಮೆಟಲ್ ಬ್ಲ್ಯಾಕ್ ಮೆಟಾಲಿಕ್‌ನಲ್ಲಿ ಬ್ಲ್ಯಾಕ್ಡ್ ಔಟ್ ಎಂಜಿನ್‌ನೊಂದಿಗೆ ಪರಿಚಯಿಸಲಾಗಿದೆ. ಏರ್‌ಬ್ಯಾಗ್‌ನೊಂದಿಗೆ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ)ನಲ್ಲಿ ಲಭ್ಯವಿರುತ್ತದೆ.

ಜಪಾನ್‌ನಿಂದ ಕಂಪ್ಲೀಟ್ಲಿ ಬಿಲ್ಟ್ ಅಪ್ ರೂಪದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಏರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಮೂಲಕ ರೈಡರ್ ಮತ್ತು ಸಹ ಸವಾರರ ಸುತ್ತಲೂ ತಣ್ಣನೆ ಗಾಳಿ ಬರುವ ವ್ಯವಸ್ಥೆ ಮಾಡಲಾಗಿದೆ.

ಮದುವೆ ಆಮಂತ್ರಣ ಪತ್ರಿಕೆ ಮೇಲೆ ʼಕೆಜಿಎಫ್‌ – 2ʼ ಚಿತ್ರದ ಫೇಮಸ್‌ ಡೈಲಾಗ್ ಮುದ್ರಣ

ವಿಸ್ತೃತ ಎಲೆಕ್ಟ್ರಿಕ್ ಸ್ಕ್ರೀನ್, ರೈಡರ್ ಮತ್ತು ಸಹ ಸವಾರಗೆ ಪ್ರತ್ಯೇಕ ಆಸನ, ಡ್ಯುಯಲ್ ಎಲ್ಇಡಿ ಫಾಗ್ ಲೈಟ್‌, ಆಟೋ ಕ್ಯಾನ್ಸಲ್ ಇಂಡಿಕೇಟರ್ ಇದರ ವಿಶೇಷತೆಗಳು.

ಇದು ಕ್ರೂಸ್ ಕಂಟ್ರೋಲ್ ಸಿಸ್ಟಮ್, ಥ್ರೊಟಲ್ ಬೈ ವೈರ್, ಆಡಿಯೊ ಮತ್ತು ನ್ಯಾವಿಗೇಷನ್ ಸಿಸ್ಟಮ್, 7 ಇಂಚಿನ ಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ಸ್ಕ್ರೀನ್ ಮತ್ತು ಎಲ್ಲಾ ಸಿಸ್ಟಮ್‌ಗಳನ್ನು ಸಕ್ರಿಯಗೊಳಿಸುವ ಮತ್ತು ಎಮರ್ಜೆನ್ಸಿ ಕೀಲಿಯನ್ನು ಸಂಯೋಜಿಸುವ ಸ್ಮಾರ್ಟ್ ಕೀ ಸಹ ಇರಲಿದೆ.

ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಬ್ಲೂಟೂತ್ ಸಂಪರ್ಕ, ಎರಡು ಯುಎಸ್‌ಬಿ ಟೈಪ್ ಸಿ ಪೋರ್ಟ್, ಗೈರೊಕಾಂಪಾಸ್ ಒಳಗೊಂಡಿರುವ ನ್ಯಾವಿಗೇಷನ್ ಸಿಸ್ಟಮ್ ಇದ್ದು, ಇದು ಸುರಂಗದೊಳಗೆ ಸಾಗುವಾಗ ಅಡೆತಡೆಯಿಲ್ಲದ ಮಾರ್ಗದರ್ಶನ ಖಾತ್ರಿಗೊಳಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...