alex Certify 2022 ಏಥರ್​ 450 ಎಕ್ಸ್​ ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2022 ಏಥರ್​ 450 ಎಕ್ಸ್​ ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಈಗಾಗಲೇ ಬೇರುಬಿಟ್ಟ ಕಂಪನಿಗಳ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿವೆ.

ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ತಯಾರಕ ಏಥರ್​ ಎನರ್ಜಿ ತನ್ನ ಪ್ರೀಮಿಯಂ ಸ್ಕೂಟರ್​ 450 ಎಕ್ಸ್​ ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ 1.37 ಲಕ್ಷ ರೂ. (ಎಕ್ಸ್​- ಶೋರೂಂ). ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ವಿಭಾಗದಲ್ಲಿ ತಾನು ಮುಂಚೂಣಿಯಲ್ಲಿ ನಿಲ್ಲಬೇಕೆಂಬ ಗುರಿಯೊಂದಿಗೆ ಮಾರುಕಟ್ಟೆಗೆ ಪ್ರವೇಶ ಕೊಟ್ಟಿದೆ.

ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತೀಯ ಎಲೆಕ್ಟ್ರಿಕ್​ ದ್ವಿಚಕ್ರ ವಾಹನ ವಿಭಾಗವು ತಿಂಗಳಿಗೆ 1 ಲಕ್ಷ ಯುನಿಟ್​ಗಳ ಮಾರಾಟ ಮೀರಬಹುದು ಎಂದು ಕಂಪನಿಯು ನಿರೀಕ್ಷಿಸಿದೆ. ಹಾಗೆಯೇ ಇದು ಶೇಕಡಾ 30 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಗುರಿ ಹಾಕಿಕೊಂಡಿದೆ.

450 ಪ್ಲಾಟ್​ಫಾರ್ಮ್​ ಜನರೇಶನ್​ ವಾಹನವನ್ನು 2018ರಲ್ಲಿ ಪ್ರಾರಂಭಿಸಿತು. ನಂತರ 2020ರಲ್ಲಿ ಸೆಕೆಂಡ್​ ಜನರೇಶನ್​ ವಾಹನ ಪರಿಚಯಿಸಿತು. ಈಗ ಮೂರನೇ ಜನರೇಶನ್​ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದೊಡ್ಡ ಬದಲಾವಣೆ ಎಂದರೆ ಬ್ಯಾಟರಿ ಪ್ಯಾಕ್​ ಸುಮಾರು 25 ಪ್ರತಿಶತದಷ್ಟು ದೊಡ್ಡದಾಗುತ್ತಿದೆ ಎಂದು ಏಥರ್​ ಎನರ್ಜಿ ಸಹ-ಸಂಸ್ಥಾಪಕ ಮತ್ತು ಸಿಇಒ ತರುಣ್​ ಮೆಹ್ತಾ ಹೇಳಿದ್ದಾರೆ.‌

ಇದರ ಪರಿಣಾಮವಾಗಿ, ಒಮ್ಮೆ ಚಾರ್ಜ್​ ಮಾಡಿದರೆ 116 ಕಿಮೀನಿಂದ 146 ಕಿಮೀಗೆ ಹೆಚ್ಚಳವಾಗುತ್ತಿದೆ. ನಗರದ ಪರಿಸ್ಥಿತಿಗಳಲ್ಲಿ ಒಂದು ಚಾರ್ಜ್​ನಿಂದ 85 ಕಿ.ಮೀ.ನಿಂದ ಸುಮಾರು 105 ಕಿಮೀಗೆ ಸಂಚರಿಸಬಹುದಾದಷ್ಟು ಏರಿಕೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...