alex Certify ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ 2 ವರ್ಷದ ಬಾಲಕಿಗಿರೋ ಅದ್ಭುತ ʼಟ್ಯಾಲೆಂಟ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ 2 ವರ್ಷದ ಬಾಲಕಿಗಿರೋ ಅದ್ಭುತ ʼಟ್ಯಾಲೆಂಟ್ʼ

2 ವರ್ಷದ ಪುಟಾಣಿ ಬಾಲಕಿಯೊಬ್ಬಳು 200ಕ್ಕೂ ಹೆಚ್ಚು ರಾಷ್ಟ್ರಗಳ ರಾಜಧಾನಿಯನ್ನ ನಿರರ್ಗಳವಾಗಿ ಹೇಳಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ಈ ವಿಡಿಯೋವನ್ನ ಐಎಎಸ್​ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಈ ವಿಡಿಯೋವನ್ನ ಶೇರ್​ ಮಾಡಿರುವ ಪ್ರಿಯಾಂಕಾ ಶುಕ್ಲಾ, ನೀವು ಎಷ್ಟು ರಾಷ್ಟ್ರಗಳ ರಾಜಧಾನಿಯ ಹೆಸರನ್ನ ಹೇಳಬಲ್ಲಿರಿ..? ಈ ವಿಡಿಯೋದಲ್ಲಿರುವ ನನ್ನ ಸಹೋದ್ಯೋಗಿಯ ಪುತ್ರಿ ಪ್ರನೀನಾಳನ್ನ ನೋಡಿ. ಈಕೆಗೆ ಕೇವಲ 2.6 ವರ್ಷ, ಆದರೂ ಸಹ ಈಕೆ 205 ರಾಷ್ಟ್ರಗಳ ರಾಜಧಾನಿಯ ಹೆಸರನ್ನ ಹೇಳುತ್ತಾಳೆ. ಪ್ರನೀನಾಳ ನೆನಪಿನ ಶಕ್ತಿ ಬಾಲ್ಯದಿಂದಲೇ ತುಂಬಾನೇ ಸ್ಟ್ರಾಂಗ್​ ಇತ್ತು ಅಂತಾ ಪ್ರದೀಪ್​ ಹೇಳ್ತಾ ಇದ್ದರು ಎಂದು ಶೀರ್ಷಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನ, ಬಹ್ರೇನ್​, ಭೂತಾನ್​, ಇಸ್ರೇಲ್​, ಚೀನಾ, ಜಪಾನ್​ ಹೀಗೆ ನೀವು ಯಾವುದೇ ರಾಷ್ಟ್ರದ ಹೆಸರನ್ನ ಹೇಳಿದ್ರು ಈಕೆ ರಾಜಧಾನಿಯ ಹೆಸರನ್ನ ಥಟ್​ ಅಂತಾ ಹೇಳುತ್ತಾಳೆ.

— Priyanka Shukla (@PriyankaJShukla) June 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...