alex Certify 2 ಸಾವಿರ ರೂಪಾಯಿ ನೋಟು ಹಿಂಪಡೆದಿದ್ದರಿಂದ ಆಗಲಿದೆ ಇಷ್ಟೆಲ್ಲಾ ಲಾಭ….! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಸಾವಿರ ರೂಪಾಯಿ ನೋಟು ಹಿಂಪಡೆದಿದ್ದರಿಂದ ಆಗಲಿದೆ ಇಷ್ಟೆಲ್ಲಾ ಲಾಭ….! ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಈಗಾಗ್ಲೇ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಿಗೆ ಹಿಂದಿರುಗಿಸುವಂತೆ ಆರ್‌ಬಿಐ ಸಾರ್ವಜನಿಕರಿಗೆ ಸೂಚಿಸಿದೆ. ಜನರು ಸೆಪ್ಟೆಂಬರ್‌ವರೆಗೆ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಬಹುದು ಅಥವಾ  ಬದಲಾಯಿಸಬಹುದು.

ಎರಡು ಸಾವಿರ ರೂಪಾಯಿ ನೋಟುಗಳ ಹಿಂಪಡೆಯುವಿಕೆಯಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಸಹಜ. ಇದು ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರಯೋಜನಕಾರಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಯನವು ಹೇಳಿದೆ. ಇನ್ನೂ ಹಲವು ಸಂಗತಿಗಳನ್ನು ಈ ಅಧ್ಯಯನ ಬಿಚ್ಚಿಟ್ಟಿದೆ.

ಸಾಲ ಮರುಪಾವತಿಯಲ್ಲಿ ಹೆಚ್ಚಳ

ಎಸ್‌ಬಿಐ ಅಧ್ಯಯನದ ಪ್ರಕಾರ 2000 ರೂಪಾಯಿ ನೋಟು ಹಿಂಪಡೆಯುವುದರಿಂದ ಸಾಲ ಮರುಪಾವತಿ ಹೆಚ್ಚಾಗಬಹುದು.  ಏಕೆಂದರೆ 2000 ರೂಪಾಯಿ ನೋಟು ವಾಪಸ್ಸಾತಿಯಿಂದಾಗಿ ಠೇವಣಿ ಹೆಚ್ಚಾಗುವ ನಿರೀಕ್ಷೆಯಿದೆ. ಸಾಲ ಹೊಂದಿರುವವರು ಬ್ಯಾಂಕ್‌ಗಳಲ್ಲಿ ಅವುಗಳ ಮರುಪಾವತಿಯನ್ನು ಮಾಡಬಹುದು.

ಬ್ಯಾಂಕ್ ಸಾಲ ನೀಡಲಿದೆ

2000 ರೂಪಾಯಿ ನೋಟುಗಳು ಬ್ಯಾಂಕ್‌ಗಳಿಗೆ ಬರುತ್ತಲೇ ಇರುವುದರಿಂದ ಬ್ಯಾಂಕ್‌ಗಳಲ್ಲಿರುವ ನಗದು ಹಣ ಹೆಚ್ಚಾಗಲಿದೆ. ಹೆಚ್ಚಿದ ಹಣವನ್ನು ಬ್ಯಾಂಕ್‌ಗಳ ಮೂಲಕ ಸಾಲ ನೀಡಲು ಬಳಸಬಹುದು. ಹಾಗಾಗಿ ಬ್ಯಾಂಕುಗಳಿಗೆ ಸಾಲ ನೀಡಲು ದೊಡ್ಡ ಅವಕಾಶವಿದೆ.

ಕ್ಯಾಶ್‌ ಆನ್‌ ಡೆಲಿವರಿ ಹೆಚ್ಚಳ

2000 ರೂಪಾಯಿ ನೋಟನ್ನು ಚಲಾಯಿಸಲು ಜನರು ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಸಹ ಆರಿಸಿಕೊಳ್ಳುತ್ತಿದ್ದಾರೆ. ಇದರಿಂದ ದೇಶದಲ್ಲಿ ಹಣದ ಹರಿವು ಕೂಡ ಹೆಚ್ಚಾಗಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡುವ ಮೂಲಕ ಜನರು 2000 ರೂಪಾಯಿ ನೋಟುಗಳನ್ನು ಪಾವತಿಸುತ್ತಿದ್ದಾರೆ. ಇದರಿಂದಾಗಿ ಕ್ಯಾಶ್ ಆನ್ ಡೆಲಿವರಿ ಆಯ್ಕೆ  ಹೆಚ್ಚಾಗಿದೆ.

GDPಗೆ ಲಾಭ

2000 ರೂಪಾಯಿ ನೋಟುಗಳ ಅಮಾನ್ಯೀಕರಣದಿಂದ  ಜಿಡಿಪಿಗೂ ಲಾಭವಾಗಬಹುದು ಎಂದು ಎಸ್‌ಬಿಐ ವರದಿ ಹೇಳಿದೆ. 2000 ರೂಪಾಯಿ ನೋಟುಗಳನ್ನು ಹಿಂಪಡೆದಿದ್ದರಿಂದ ಬಳಕೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ, ಇದು ಜಿಡಿಪಿ ಮೇಲೆ ಪರಿಣಾಮ ಬೀರಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...