alex Certify ಕೋಚಿಂಗ್ ಸೆಂಟರ್ ನಲ್ಲಿ ಪಾಠ ಕೇಳುತ್ತಿದ್ದ ವೇಳೆಯೇ ಹೃದಯಾಘಾತ; ಸ್ಥಳದಲ್ಲೇ ಸಾವನ್ನಪ್ಪಿದ ವಿದ್ಯಾರ್ಥಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಚಿಂಗ್ ಸೆಂಟರ್ ನಲ್ಲಿ ಪಾಠ ಕೇಳುತ್ತಿದ್ದ ವೇಳೆಯೇ ಹೃದಯಾಘಾತ; ಸ್ಥಳದಲ್ಲೇ ಸಾವನ್ನಪ್ಪಿದ ವಿದ್ಯಾರ್ಥಿ…!

ಕೋಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರೋ ದುರಂತ ಘಟನೆ ಮಧ್ಯಪ್ರದೇಶದ ಇಂಧೋರ್ ನಲ್ಲಿ ನಡೆದಿದೆ.

ರಾಜ್ ಲೋಧಿ ಎಂಬ ವಿದ್ಯಾರ್ಥಿ ಕೋಚಿಂಗ್ ಸೆಂಟರ್ ನಲ್ಲಿ ಪಾಠ ಕೇಳುತ್ತಿದ್ದ ವೇಳೆಯೇ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತರಗತಿಯಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.

ರಾಜ್ ಲೋಧಿ ಸಾತ್ನಾ ಮೂಲದವರಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಇಂದೋರ್‌ಗೆ ಬಂದಿದ್ದರು. ತರಗತಿ ನಡೆಯುತ್ತಿದ್ದ ವೇಳೆಯೇ ಬುಧವಾರ ಮಧ್ಯಾಹ್ನ 12:49 ರ ವೇಳೆಯಲ್ಲಿ ಇದ್ದಕ್ಕಿದ್ದಂತೆ ಬೆಂಚ್ ಮೇಲೆ ಬಿದ್ದಿದ್ದಾನೆ. ಆತನ ಪಕ್ಕದಲ್ಲಿದ್ದ ವಿದ್ಯಾರ್ಥಿ ಆರಂಭದಲ್ಲಿ ನಿದ್ದೆ ಮಾಡುತ್ತಿದ್ದಾನೆಂದು ಭಾವಿಸಿದ್ದಾನೆ. ಆದರೆ ರಾಜ್ ಮುಖಭಾವ ಬದಲಾಗುತ್ತಿದ್ದಂತೆ ಗಾಬರಿಗೊಂಡ ವಿದ್ಯಾರ್ಥಿ ಆತನ ಬೆನ್ನು ಉಜ್ಜುತ್ತಾ ಎಚ್ಚರಿಸಲು ಪ್ರಯತ್ನಿಸಿದನು. ಆದರೆ ರಾಜ್ ಲೋಧಿಗೆ ಹೃದಯಾಘಾತವಾಗಿತ್ತು .

ಶಿಕ್ಷಕರು ಕೋಚಿಂಗ್ ಮ್ಯಾನೇಜ್‌ಮೆಂಟ್‌ಗೆ ಎಚ್ಚರಿಕೆ ನೀಡಿ ಆತನನ್ನು 5-7 ನಿಮಿಷಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ರಾಜ್ ಲೋಧಿ ಮೃತಪಟ್ಟಿರೋದಾಗಿ ವೈದ್ಯರು ಘೋಷಿಸಿದರು. ಬಳಿಕ ಮೃತನ ಕುಟುಂಬ ಸದಸ್ಯರು ಇಂದೋರ್‌ಗೆ ಆಗಮಿಸಿ ಶವಪರೀಕ್ಷೆಯ ನಂತರ ರಾಜ್ ದೇಹವನ್ನು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದರು.

ಪ್ರಾಥಮಿಕ ಶವಪರೀಕ್ಷೆ ನಡೆಸಿದ ಡಾ.ಭರತ್ ವಾಜಪೇಯಿ “ಹೃದಯ ಸ್ತಂಭನದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಪರೀಕ್ಷೆ ಮುಗಿದ ನಂತರ ನಿಖರ ಕಾರಣ ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

ರಾಜ್ ಲೋಧಿ ‘ಪ್ರೋಟೀನ್ ಡಯಟ್’ ನಲ್ಲಿದ್ದು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಜಿಮ್‌ಗೆ ಹೋಗುತ್ತಿದ್ದ. ಇತ್ತೀಚಿಗೆ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದು ಅದಕ್ಕಾಗಿ ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಎಂದು ಮೃತ ರಾಜ್ ಲೋಧಿಯ ಅಣ್ಣ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...