alex Certify ಕಾಡಾನೆ ದಾಳಿಗೆ ಬಲಿಯಾದ ವಿದ್ಯಾರ್ಥಿನಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡಾನೆ ದಾಳಿಗೆ ಬಲಿಯಾದ ವಿದ್ಯಾರ್ಥಿನಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆ ಸುತ್ತಮುತ್ತ ಕಾಡಾನೆ ದಾಂಧಲೆ ನಡೆಸಿದ್ದು, ಆನೆ ದಾಳಿಗೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಹಿರೇಕೋಗಲೂರು ಸಮೀಪದ ಸೋಮಲಾಪುರ ಗ್ರಾಮದ ವಿದ್ಯಾರ್ಥಿನಿ ಕವನಾ(18) ಮೃತಪಟ್ಟವರು. ತಾಯಿ ಜೊತೆಗೆ ಜಮೀನಿನಲ್ಲಿ ಅವರೇಕಾಯಿ ಬಿಡಿಸಲು ಹೋಗಿದ್ದಾಗ ಹಿಂಬದಿಯಿಂದ ಬಂದ ಆನೆ ದಾಳಿ ನಡೆಸಿದೆ. ತಾಯಿ ಮಂಜುಳಾ ಗಾಬರಿಯಿಂದ ಕೂಗಾಡಿದಾಗ ಅಕ್ಕಪಕ್ಕದ ಜಮೀನಿನವರು ಓಡಿ ಬಂದು ಆನೆಯನ್ನು ಓಡಿಸಿದ್ದಾರೆ.

ಮಂಜುಳಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ದಾಳಿಯಿಂದ ಕವನಾ ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ಇನ್ನೆರಡು ದಿನಗಳ ಒಳಗೆ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಪುಟ್ನಳ್ಳಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...