ಹರಿಯಾಣದ ಮಹೇಂದ್ರಗಢದ ಮಯಾಂಕ್ ‘ಕೌನ್ ಬನೇಗಾ ಕರೋಡ್ ಪತಿ- 15’ ನಲ್ಲಿ ಒಂದು ಕೋಟಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅವರಿಂದ ಮಯಾಂಕ್ ಬಹುಮಾನವನ್ನು ಸ್ವೀಕರಿಸುವ ಪ್ರೋಮೋವನ್ನು ತಯಾರಕರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿಯ 15ನೇ ಸೀಸನ್ನಲ್ಲಿ 16ನೇ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟು ರೂ 1 ಕೋಟಿ ಗೆದ್ದಿದ್ದಾರೆ.ಪ್ರತಿ ಪ್ರಶ್ನೆಗೆ ಸುಲಭವಾಗಿ ಉತ್ತರಿಸಿದ ಬಾಲಕ ಅಂತಿಮವಾಗಿ ಅವರು ಒಂದು ಕೋಟಿ ಗೆಲ್ಲಲು ಕಾರಣರಾದರು. ಅಷ್ಟೇ ಅಲ್ಲ, ಮಯಾಂಕ್ ಅವರ ಬುದ್ಧಿವಂತಿಕೆಯಿಂದ ಆಕರ್ಷಿತರಾದ ಬಿಗ್ ಬಿ ಬಾಲಕನನ್ನು ಹೊಗಳಿದ್ದಾರೆ.