alex Certify ಅಶ್ಲೀಲ ಕಮೆಂಟ್ ಮಾಡಿದ ಯುವಕನನ್ನು ಹತ್ಯೆ ಮಾಡಿದ 14 ವರ್ಷದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ಕಮೆಂಟ್ ಮಾಡಿದ ಯುವಕನನ್ನು ಹತ್ಯೆ ಮಾಡಿದ 14 ವರ್ಷದ ಬಾಲಕಿ

ತನಗೆ ಅಶ್ಲೀಲ ಕಮೆಂಟ್ ಮಾಡಿದ ಪಕ್ಕದ ಮನೆ ಯುವಕನನ್ನು ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ತಂದೆ -ತಾಯಿಯನ್ನು ಬಂಧಿಸಿದ್ದಾರೆ.

ಪ್ರತಿನಿತ್ಯವೂ ರಾಮನಾಥ್ ಎಂಬ ಈ ಯುವಕ ಬಾಲಕಿಗೆ ಚುಡಾಯಿಸುತ್ತಿದ್ದು, ಈ ವಿಚಾರವನ್ನು ಆಕೆ ತನ್ನ ಪೋಷಕರಿಗೂ ತಿಳಿಸಿದ್ದಳು ಎನ್ನಲಾಗಿದೆ. ಹೀಗಾಗಿ ಇವರಿಬ್ಬರ ಕುಟುಂಬದ ನಡುವೆ ಆಗಾಗ ಮಾತಿನ ಚಕಮಕಿಯೂ ನಡೆದಿತ್ತು ಎಂದು ತಿಳಿದುಬಂದಿದೆ.

ಮಂಗಳವಾರದಂದು ರಾಮನಾಥ್ ಬಾಲಕಿಗೆ ಮತ್ತೆ ಅಶ್ಲೀಲವಾಗಿ ಚುಡಾಯಿಸಿದ ಇದು ಬಾಲಕಿಯನ್ನು ಕೆರಳಿಸಿದೆ. ಮನೆಗೆ ಹಿಂದಿರುಗಿದ ಆಕೆ ತನ್ನ ತಂದೆ – ತಾಯಿಯನ್ನು ಕರೆದುಕೊಂಡು ಬಂದಿದ್ದು, ಆಗ ಕೈಕೈ ಮಿಲಾವಣೆ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ್ದು ಬಾಲಕಿ ಚಾಕುವಿನಿಂದ ರಾಮನಾಥ್ ಎದೆಗೆ ಇರಿದಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ರಾಮನಾಥ್ ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...