alex Certify BIG NEWS: ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ; 137 ಜನರು ಸಾವು; 11 ವಾಯುನೆಲೆಗಳು ನೆಲಸಮ; ಉಕ್ರೇನ್ ಪರಮಾಣು ಸ್ಥಾವರ ರಷ್ಯಾ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್ ಮೇಲೆ ಮುಂದುವರೆದ ರಷ್ಯಾ ದಾಳಿ; 137 ಜನರು ಸಾವು; 11 ವಾಯುನೆಲೆಗಳು ನೆಲಸಮ; ಉಕ್ರೇನ್ ಪರಮಾಣು ಸ್ಥಾವರ ರಷ್ಯಾ ವಶಕ್ಕೆ

ಕೈವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಎರಡನೇ ದಿನ ಮುಂದುವರೆದಿದ್ದು, ರಷ್ಯಾದ ಭೀಕರ ದಾಳಿಗೆ ಉಕ್ರೇನ್ ನಲ್ಲಿ 137 ಜನರು ಸಾವನ್ನಪ್ಪಿದ್ದು, 316 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಷ್ಯಾ ದಾಳಿಗೆ ಪುಟ್ಟ ರಾಷ್ಟ್ರ ಉಕ್ರೇನ್ ನಲುಗಿ ಹೋಗಿದ್ದು, ಉಕ್ರೇನ್ ನ 11 ವಾಯುನೆಲೆಗಳನ್ನು ರಷ್ಯಾ ನೆಲಸಮಗೊಳಿಸಿದೆ. ಸೈನಿಕರು, ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ಈವರೆಗೆ 137 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.

BIG NEWS: ಕಂದಾಯ ಸಚಿವರ ಹೆಸರಲ್ಲಿ ಬೆದರಿಕೆ; ವರ್ಗಾವಣೆ ದಂಧೆಗೂ ಕುಮ್ಮಕ್ಕು; PWD ನಿವೃತ್ತ ಎಂಜಿನಿಯರ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಉಕ್ರೇನ್ ನ ರಾಜಧಾನಿ ಕೈವ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ನಿರಂತರವಾಗಿ ರಷ್ಯಾ ಮಿಲಿಟರಿ ಪಡೆಗಳು ದಾಳಿ ನಡೆಸಿದ್ದು, ಇದೀಗ ಕೈವ್ ನ ಎರಡು ಕಡೆಗಳಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ವಿಶ್ವದ ಪ್ರಮುಖ ನಾಯಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದರೂ ಲೆಕ್ಕಿಸದ ರಷ್ಯಾ ತನ್ನ ಆಕ್ರಮಣ ಮುಂದುವರೆಸಿದ್ದು, ಉಕ್ರೇನ್ ನ ಚಿರ್ನೋಬಿಲ್ ಪರಮಾಣು ಸ್ಥಾವರವನ್ನು ವಶಕ್ಕೆ ಪಡೆದಿದೆ. ಇನ್ನು ಕೈವ್ ನಗರವನ್ನೇ ಕೈವಶ ಮಾಡಿಕೊಳ್ಳಲು ರಷ್ಯಾ ಮಿಲಿಟರಿ ಪಡೆ ಮುಂದಾಗಿದೆ.

ಈ ನಡುವೆ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ಕರೆತರಲು ವಿದೇಶಾಂಗ ಸಚಿವಾಲಯ ಸಿದ್ಧತೆ ನಡೆಸಿದೆ. ಪೋಲೆಂಡ್, ರೊಮೇನಿಯಾ, ಹಂಗೇರಿ ಮಾರ್ಗದ ಮೂಲಕ ಭಾರತಕ್ಕೆ ಕರೆತರಲು ಚಿಂತನೆ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...