alex Certify 132 ಪ್ರಯಾಣಿಕರಿದ್ದ ವಿಮಾನ ದುರಂತ ತಿಳಿದು ಚೀನಾ ಅಧ್ಯಕ್ಷರಿಗೆ ಆಘಾತ: ತನಿಖೆಗೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

132 ಪ್ರಯಾಣಿಕರಿದ್ದ ವಿಮಾನ ದುರಂತ ತಿಳಿದು ಚೀನಾ ಅಧ್ಯಕ್ಷರಿಗೆ ಆಘಾತ: ತನಿಖೆಗೆ ಆದೇಶ

ಚೀನಾದ ಜೆಟ್​ ವಿಮಾನ ಬೋಯಿಂಗ್​ 737 ಪತನದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಅಪಘಡ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಶೀಘ್ರವೇ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಪತನಕ್ಕೀಡಾದ ಈ ಜೆಟ್​ ವಿಮಾನದಲ್ಲಿ 132 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.
ಸ್ಥಳೀಯ ಅಧಿಕಾರಿಗಳು ನಕ್ಷೆಗಳನ್ನು ಬಳಸಿಕೊಂಡು ನಿಖರವಾದ ಕ್ರ್ಯಾಶ್ ಸೈಟ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಪ್ರಸ್ತುತ ಈ ದುರಂತದಲ್ಲಿ ಸಾವನ್ನಪ್ಪಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಚೀನಾ ಈಸ್ಟರ್ನ್ ಏರ್‌ಲೈನ್ಸ್‌ನ ಬೋಯಿಂಗ್ 737 ಪ್ರಯಾಣಿಕ ವಿಮಾನವು ಕುನ್ಮಿಂಗ್‌ನಿಂದ ಹೊರಟು ಗುವಾಂಗ್‌ಝೌಗೆ ತೆರಳುತ್ತಿದ್ದಾಗ ಪತನಗೊಂಡಿತು. ಅಪಘಾತವು ಪರ್ವತಗಳ ಮೇಲೆ ಬೆಂಕಿಯನ್ನು ಉಂಟುಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...