alex Certify ಆಫ್ರಿಕಾದ ಎತ್ತರದ ಪರ್ವತವೇರಿದ ಹೈದರಾಬಾದ್ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್ರಿಕಾದ ಎತ್ತರದ ಪರ್ವತವೇರಿದ ಹೈದರಾಬಾದ್ ಬಾಲಕಿ

ಹೈದರಾಬಾದ್: 13 ವರ್ಷದ ಬಾಲಕಿಯೊಬ್ಬಳು ಇತ್ತೀಚೆಗೆ ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಕಿಲಿಮಂಜಾರೋ ಪರ್ವತವನ್ನು ಏರಿ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ. 2024ರ ಮೊದಲು ಎಲ್ಲಾ 7 ಶೃಂಗಗಳನ್ನು ಏರುವ ಗುರಿಯನ್ನು ಬಾಲಕಿ ಹೊಂದಿದ್ದಾಳೆ.

ಇದೊಂದು ಸಾಹಸಮಯ ಅನುಭವವಾಗಿತ್ತು ಅಂತಾ ಕಿಲಿಮಂಜಾರೋ ಪರ್ವತವನ್ನು ಏರಿದ ಬಳಿಕ ಬಾಲಕಿ ಹಸ್ವಿ ತಿಳಿಸಿದ್ದಾಳೆ. ಈ ವರ್ಷ ಏಪ್ರಿಲ್‌ನಲ್ಲಿ ನಡೆದ ಎವರೆಸ್ಟ್ ಬೇಸ್ ಕ್ಯಾಂಪ್ ನಂತರ ಮೂರು ತಿಂಗಳ ಹಿಂದೆಯೇ ಈ ಪರ್ವತಾರೋಹಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಎಂದು ಹಸ್ವಿ ವಿವರಿಸಿದ್ದಾರೆ.

ಇನ್ನು ಪರ್ವತಾರೋಹಣಕ್ಕೆ ಮಾನಸಿಕವಾಗಿ ಸದೃಢವಾಗಿರಬೇಕು ಎಂದಿರುವ ಹಸ್ವಿ, ಯೋಗ, ಧ್ಯಾನದಂತಹ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿದ್ದರಂತೆ. ಅಲ್ಲದೆ 2024 ರ ಮೊದಲು ಎಲ್ಲಾ ಏಳು ಶಿಖರಗಳನ್ನು ಏರಲು ಬಯಸಿದ್ದು, ಅದಕ್ಕಾಗಿ ಈಗಾಗಲೇ ಎಲ್ಲಾ ಯೋಜನೆಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...