alex Certify ಮೂರು ಪುಸ್ತಕಗಳ ಲೇಖಕಿ ಕಣಿವೆ ರಾಜ್ಯದ ಈ 12ನೇ ತರಗತಿ ವಿದ್ಯಾರ್ಥಿನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರು ಪುಸ್ತಕಗಳ ಲೇಖಕಿ ಕಣಿವೆ ರಾಜ್ಯದ ಈ 12ನೇ ತರಗತಿ ವಿದ್ಯಾರ್ಥಿನಿ..!

12th Standard Girl Pens 3 Books, Becomes Youngest Author From Kashmir Valleyಕುಲ್ಗಾಮ್: 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಇದುವರೆಗೆ ಮೂರು ಪುಸ್ತಕಗಳನ್ನು ಬರೆದಿರುವ ಮುಖಾಂತರ ಕಾಶ್ಮೀರ ಕಣಿವೆಯ ಅತ್ಯಂತ ಕಿರಿಯ ಲೇಖಕಿಯರಲ್ಲಿ ಒಬ್ಬರಾಗಿರುವ ಪ್ರಸಿದ್ಧಿ ಪಡೆದಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ವಿದ್ಯಾರ್ಥಿನಿ ಬುಶ್ರಾ ನಿದಾ ಎಂಬಾಕೆಯೇ ಈ ಸಾಧನೆ ಮಾಡಿದವರು. ನಿದಾ ಬರೆದಿರುವ ಮೂರು ಪುಸ್ತಕಗಳೆಂದರೆ ಟುಲಿಪ್ಸ್ ಆಫ್ ಫೀಲಿಂಗ್ಸ್, ದ ಡೇವಿ ಮತ್ತು E=mc2.

ಶಾಲೆಯಲ್ಲೇ ಶಿಕ್ಷಕನ ತಲೆ ಮೇಲೆ ಡಸ್ಟ್ ಬಿನ್ ಹಾಕಿ ಪುಂಡಾಟಿಕೆ ಮೆರೆದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್

ಈ ಪುಸ್ತಕಗಳನ್ನು ಬರೆದ ನಂತರ, ವಿದ್ಯಾರ್ಥಿನಿ ಅಪಾರ ಖ್ಯಾತಿ ಗಳಿಸಿದ್ದಾರೆ. ಅಷ್ಟೇ ಅಲ್ಲ ಮೊದಲ ಮತ್ತು ಎರಡನೆಯ ಪುಸ್ತಕಗಳಿಗೆ ಪ್ರಶಸ್ತಿ ಕೂಡ ಸಿಕ್ಕಿದೆ. ಬುಶ್ರಾ ಅವರ ಮೊದಲ ಪುಸ್ತಕ ಟುಲಿಪ್ಸ್ ಆಫ್ ಫೀಲಿಂಗ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಿಂದ ಮೆಚ್ಚುಗೆ ಪ್ರಶಸ್ತಿಯನ್ನು ಪಡೆದರೆ, ಅವರ ಎರಡನೇ ಪುಸ್ತಕ ದಿ ಡೇವಿ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ ಹಾಗೂ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನೋಂದಾಯಿಸಲ್ಪಟ್ಟಿದೆ. ತಮ್ಮ ಎರಡನೇ ಪುಸ್ತಕಕ್ಕಾಗಿ ಇಂಟರ್ನ್ಯಾಷನಲ್ ಕಲಾಂ ಗೋಲ್ಡನ್ ಅವಾರ್ಡ್ 2021 ಪ್ರಶಸ್ತಿಯನ್ನು ಗೆದ್ದಿದ್ದಾರೆ.

ತನ್ನ ಮೂರನೇ ಪುಸ್ತಕ E=mc2, ಇದು ಬುಶ್ರಾ ಬರೆದ ಮೊದಲ ಕವನ ಪುಸ್ತಕ. ಇದನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಲು ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...