alex Certify BREAKING : ಇರಾಕ್ ನಲ್ಲಿ ಭೀಕರ ಅಗ್ನಿ ದುರಂತ : ಮದುವೆ ಮಂಟಪದಲ್ಲಿ ಬೆಂಕಿ ಬಿದ್ದು 100 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಇರಾಕ್ ನಲ್ಲಿ ಭೀಕರ ಅಗ್ನಿ ದುರಂತ : ಮದುವೆ ಮಂಟಪದಲ್ಲಿ ಬೆಂಕಿ ಬಿದ್ದು 100 ಮಂದಿ ಸಾವು

ಇರಾಕ್: ಉತ್ತರ ಇರಾಕ್ ನ ಮದುವೆ ಮಂಟಪದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಇರಾಕ್ನ ಹಮ್ದಾನಿಯಾ ಪ್ರದೇಶದ ನಿನೆವೆ ಪ್ರಾಂತ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲಿ) ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ಈ ದುರಂತ ಸಂಭವಿಸಿದೆ.

ಮದುವೆಯಲ್ಲಿ ಸುಮಾರು 700 ಜನರು ಭಾಗಿಯಾಗಿದ್ದರು. ಈ ವೇಳೆ ಖುಷಿಯಲ್ಲಿದ್ದ ಕುಟುಂಬ ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಕಿಡಿ ಮದುವೆ ಮಂಟಪಕ್ಕೆ ಬಿದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಮದುವೆಯ ಹಾಲ್ ಗೆ ಹಬ್ಬಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...