alex Certify ಸಹೋದರಿಯ ಕಷ್ಟಕ್ಕೆ ಮಿಡಿಯಿತು ಪುಟ್ಟ ಬಾಲಕನ ಹೃದಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರಿಯ ಕಷ್ಟಕ್ಕೆ ಮಿಡಿಯಿತು ಪುಟ್ಟ ಬಾಲಕನ ಹೃದಯ..!

10-Year-Old Hyderabad Boy Sells Bird Food to Raise Money For Cancer-affected Sister

ಹೈದರಾಬಾದ್: ಸಹೋದರಿಯ ಚಿಕಿತ್ಸೆಯ ವೆಚ್ಚ ಭರಿಸಲು ಬಾಲಕನೊಬ್ಬ ಪಕ್ಷಿ ಆಹಾರ ಮಾರಾಟಕ್ಕೆ ಮುಂದಾಗಿರುವ ಹೃದಯಸ್ಪರ್ಶಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಹೌದು, 10 ವರ್ಷದ ಬಾಲಕ ಸಯ್ಯದ್ ಅಜೀಜ್ ತನ್ನ 12 ವರ್ಷದ ಸಹೋದರಿ ಸಕೀನಾ ಬೇಗಂನ ಚಿಕಿತ್ಸೆಗೆ ಹಣ ಸಂಗ್ರಹಿಸಲು ಸಹಾಯ ಮಾಡುತ್ತಿದ್ದಾನೆ.

ಈಕೆ ಎರಡು ವರ್ಷಗಳಿಂದ ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಈಕೆಯ ಚಿಕಿತ್ಸೆಗಾಗಿ ಹೆತ್ತವರು ಸಾಕಷ್ಟು ಕಷ್ಟಪಡುತ್ತಿರುವುದನ್ನು ನೋಡಿದ ಅಜೀಜ್, ತನ್ನ ತಾಯಿಯೊಂದಿಗೆ ಪಕ್ಷಿ ಆಹಾರವನ್ನು ಮಾರಾಟ ಮಾಡಲು ನಿರ್ಧರಿಸಿದನು.

ಸಿದ್ದಾರ್ಥ್ ಮಲ್ಹೋತ್ರಾ ಆತ್ಮೀಯ ಸ್ನೇಹಿತ ಅಂದ್ರು ಕಿಯಾರಾ

‘’ಸಕೀನಾಳ ಜೀವ ಉಳಿಸಲು ರೇಡಿಯೋ ಥೆರಪಿಗೆ ಒಳಗಾಗಬೇಕೆಂದು ವೈದ್ಯರು ನಮಗೆ ಸೂಚಿಸಿದ್ದಾರೆ. ನಾವು ತೆಲಂಗಾಣ ಸರ್ಕಾರದಿಂದ ಹಣವನ್ನು ಸ್ವೀಕರಿಸಿದ್ದೇವೆ ಮತ್ತು ಆಕೆಯ ವಿಕಿರಣ ಚಿಕಿತ್ಸೆಯಲ್ಲಿ ಸಂಪೂರ್ಣ ವೆಚ್ಚವಾಗಿದೆ. ಇನ್ನೂ ಕೂಡ ವೈದ್ಯಕೀಯ ಅಗತ್ಯೆಗಳಿಗಾಗಿ ಸಾಕಷ್ಟು ಹಣದ ಅಗತ್ಯವಿದೆ’’ ಎಂದು ಈಕೆಯ ತಾಯಿ ತಿಳಿಸಿದ್ದಾರೆ.

ಆದಾಗ್ಯೂ, ಅಜೀಜ್ ತನ್ನ ಸಹೋದರಿಗೆ ಸಹಾಯ ಮಾಡಲು ತನ್ನ ಶಿಕ್ಷಣವನ್ನು ಬಿಟ್ಟಿಲ್ಲ. ಹೈದರಾಬಾದಿನ ಸ್ಥಳೀಯ ಮದರಸಾದಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಿದ್ದಾನೆ. ಈ ಪುಟ್ಟ ಬಾಲಕ ತನ್ನ ತಾಯಿಯೊಂದಿಗೆ ಬೆಳಿಗ್ಗೆ 6 ರಿಂದ 8 ರವರೆಗೆ ಪಕ್ಷಿ ಆಹಾರವನ್ನು ಮಾರಾಟ ಮಾಡಿ ಬಳಿಕ ತರಗತಿಗೆ ಹಾಜರಾಗುತ್ತಾನೆ.

ಈ ಹಿಂದೆ ದೆಹಲಿಯಲ್ಲೂ ಇದೇ ರೀತಿ ಬಾಲಕಿಯೊಬ್ಬಳು ತನ್ನ ತಾಯಿಯ ಚಿಕಿತ್ಸೆಯ ವೆಚ್ಚ ಭರಿಸಲು ಪಕ್ಷಿ ಆಹಾರ ಮಾರಾಟ ಮಾಡಲು ಮುಂದಾಗಿದ್ದಳು. ಈಕೆಯನ್ನು ನೋಡಿದ ಆರಕ್ಷಕರು ಬಾಲಕಿಗೆ ಸಹಾಯ ಮಾಡಿ, ಶಾಲೆಗೆ ಸೇರಿಸಿದ್ದರು ಎಂದು ವರದಿಯಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...