alex Certify VIDEO | ಬಾಲ್​ ಬದಲು ಪುಟ್ಟ ಬಾಲಕ……! ನೀವಿಂಥ ಕ್ರಿಕೆಟ್​ ನೋಡಿರಲಿಕ್ಕೆ ಸಾಧ್ಯವೇ ಇಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIDEO | ಬಾಲ್​ ಬದಲು ಪುಟ್ಟ ಬಾಲಕ……! ನೀವಿಂಥ ಕ್ರಿಕೆಟ್​ ನೋಡಿರಲಿಕ್ಕೆ ಸಾಧ್ಯವೇ ಇಲ್ಲ

ನೀವು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಬಹಳ ಮಂದಿ ಕ್ರಿಕೆಟ್​ ಆಡಿರುವುದನ್ನು ನೋಡಿರಬೇಕು ಅಲ್ಲವೆ? ಕ್ರಿಕೆಟ್​ ಎಂದರೆ ಸಾಮಾನ್ಯವಾಗಿ ಒಂದೇ ತೆರನಾದ ನಿಯಮಗಳು ಇರುತ್ತವೆ. ಆದರೆ ಈಗ ವೈರಲ್​ ಆಗಿರುವ ಕ್ರಿಕೆಟ್​ ಮಾತ್ರ ನೋಡಲು ಸಾಧ್ಯವೇ ಇಲ್ಲ ಬಿಡಿ !

ಅಂಥದ್ದೊಂದು ಅಪರೂಪದ, ನಕ್ಕೂ ನಕ್ಕೂ ಸುಸ್ತಾಗುವ ಕ್ರಿಕೆಟ್​ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಇಲ್ಲಿ ಬಾಲ್​ ಬದಲು ಪುಟ್ಟ ಬಾಲಕ ಇದ್ದಾನೆ ! ಬ್ಯಾಟ್ಸ್​ಮನ್​ ಬ್ಯಾಟ್​ಗೆ ಸಿದ್ಧನಾಗಿದ್ದರೆ ಅತ್ತ ಕಡೆಯಿಂದ ಬಾಲ್​ ಬದಲು ಪುಟ್ಟ ಬಾಲಕ ಬರುತ್ತಾನೆ.

ಹಾಗೆಂದು ಬಾಲಕನಿಗೆ ಇಲ್ಲಿ ಹಾನಿಯಾಗಿದೆ ಎಂದು ಭಾವಿಸುವುದು ಬೇಡ. ಇಂಥದ್ದೊಂದು ನಗುವಿನ ಕ್ರಿಕೆಟ್​ ಇದಾಗಿದೆ. ಕೆಲವು ಬಳಕೆದಾರರು ಈ ಕ್ರಿಕೆಟ್​ ಆಟವನ್ನು ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾಗೂ ಟ್ಯಾಗ್ ಮಾಡಿದ್ದಾರೆ. ಈ ಯುವಕರಿಗೆ ಮುಂದಿನ ವಿಶ್ವಕಪ್‌ನಲ್ಲಿ ಆಡಲು ಅವಕಾಶ ನೀಡುತ್ತಾರೆಯೇ ಎಂದು ಒಬ್ಬ ಬಳಕೆದಾರರು ಐಸಿಸಿಯನ್ನು ಕೇಳಿದ್ದಾರೆ  !
ಒಟ್ಟಿನಲ್ಲಿ ಜಾಲತಾಣದಲ್ಲಿ ಈ ಕ್ರಿಕೆಟ್​ಗೆ ಈಗ ಭಾರಿ ಡಿಮಾಂಡ್​ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...