alex Certify Shocking…! ಹತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಫ್ಯಾಷನ್‌ ಡಿಸೈನರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking…! ಹತ್ತನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಫ್ಯಾಷನ್‌ ಡಿಸೈನರ್‌

ಪ್ರತಿಯೊಬ್ಬರ ಜೀವನದಲ್ಲೂ ಸಂಕಷ್ಟ ಅನುಭವಿಸಿದ ಕುರಿತು ಹಲವು ಕತೆಗಳು ಇರುತ್ತವೆ. ಅದರಲ್ಲೂ, ಹೆಣ್ಣುಮಕ್ಕಳು ತಾವು ಅನುಭವಿಸಿರುವ ನೋವು, ಸಂಕಷ್ಟಗಳನ್ನು ಎಲ್ಲರ ಎದುರು ಹೇಳಿಕೊಳ್ಳುವ ರೀತಿಯಲ್ಲಿ ಇರುವುದಿಲ್ಲ.

ಆದರೆ, ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ನಡೆಸಿಕೊಡುವ ’ಲಾಕ್‌ ಅಪ್‌’ ಎಂಬ ರಿಯಾಲಿಟಿ ಶೋನಲ್ಲಿ, ಯಾರ ಹತ್ತಿರವೂ ಹೇಳಿಕೊಳ್ಳದ ನೋವುಗಳನ್ನು ಹಂಚಿಕೊಳ್ಳುವ ಅವಕಾಶ ನೀಡಲಾಗಿದೆ. ಇದೇ ಶೋನಲ್ಲಿ ಖ್ಯಾತ ಫ್ಯಾಷನ್‌ ಡಿಸೈನರ್‌ ಒಬ್ಬರು ಹಂಚಿಕೊಂಡ ವಿಷಯಗಳು ಸ್ಫೋಟಕವಾಗಿವೆ.

ಹೌದು, ಶೈಷಾ ಶಿಂಧೆ ಅವರು ತಮ್ಮ 10ನೇ ವಯಸ್ಸಿನಲ್ಲಿಯೇ ತನಗಿಂತ ಕೆಲವೇ ವರ್ಷ ದೊಡ್ಡವನಿದ್ದ ಸಂಬಂಧಿಕನೊಬ್ಬನಿಂದ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿದ ಕಂಗನಾ ರಣಾವತ್‌ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.

’ನನಗಾಗ 10 ವರ್ಷ ವಯಸ್ಸು. ನನ್ನ ಕುಟುಂಬಕ್ಕೆ ಆಪ್ತನಾಗಿದ್ದವನೊಬ್ಬ ನನ್ನ ಜತೆ ಆತ್ಮೀಯವಾಗಿದ್ದ. ಆದರೆ, ಅದೇ ಆತ್ಮೀಯತೆಯನ್ನು ಆತ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಲು ಬಳಸಿಕೊಂಡ. ಅದು ಆರಂಭದಲ್ಲಿ ನನಗೆ ಲೈಂಗಿಕ ಕಿರುಕುಳ ಎಂದು ಅನಿಸಿರಲಿಲ್ಲ. ಅವನು ನನಗೆ ಲೈಂಗಿಕ ಕಿರುಕುಳ ನೀಡಿದ್ದಾನಾ ಎಂಬ ಪ್ರಶ್ನೆ ಕಾಡುತ್ತಿತ್ತು. ಕೆಲವು ವರ್ಷಗಳ ಬಳಿಕವೇ ಆತ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದು ಅರ್ಥವಾಯಿತು’ ಎಂದು ಶೈಷಾ ಹೇಳಿದ್ದಾರೆ.

ನೀವು ಪ್ರತಿರೋಧ ಒಡ್ಡಲಿಲ್ಲವೇ ಎಂದು ಕಂಗನಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶೈಷಾ, ’ನಾನು ಪ್ರತಿರೋಧ ಒಡ್ಡಲಿಲ್ಲ. ನನಗೆ ಆಗ ಏನೂ ತಿಳಿಯುತ್ತಿರಲಿಲ್ಲ. ನಾನು ಆತನಿಗೆ ಹೆಚ್ಚು ಸಲುಗೆ ನೀಡಿದ್ದೇ ಆತ ನನ್ನ ಮೇಲೆ ಎರಗಲು ಕಾರಣವಾಯಿತಾ ಎಂಬ ಪ್ರಶ್ನೆ ಕಾಡುತ್ತದೆ. ನಾವಿಲ್ಲಿ ಚರ್ಚಿಸುತ್ತಿರುವ ವಿಷಯದ ಬಗ್ಗೆ ಈಗ ಅವನಿಗೆ ಅರಿವಾಗಿರಬೇಕು’ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...