alex Certify ಗ್ರೇಟರ್​ ನೋಯ್ಡಾದಲ್ಲಿ ದಟ್ಟ ಮಂಜಿನಿಂದಾಗಿ ಸಾಲು ಸಾಲು ಅಪಘಾತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರೇಟರ್​ ನೋಯ್ಡಾದಲ್ಲಿ ದಟ್ಟ ಮಂಜಿನಿಂದಾಗಿ ಸಾಲು ಸಾಲು ಅಪಘಾತ..!

ಗ್ರೇಟರ್​ ನೋಯ್ಡಾದಲ್ಲಿ ದಟ್ಟ ಮಂಜಿನಿಂದಾಗಿ ಪ್ರತ್ಯೇಕ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು,
ಡಜನ್​ಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗ್ಗೆ ಡಂಕೌರ್​ನ ಈಸ್ಟರ್ನ್​ ಫೆರಿಫೆರಲ್​ ಎಕ್ಸ್​ಪ್ರೆಸ್​ ವೇನಲ್ಲಿ ಸಂಭವಿಸಿದ ಅಪಘಾತದಲ್ಲಿ ಸುಮಾರು 15 ರಿಂದ 20 ವಾಹನಗಳು ಜಖಂ ಆಗಿವೆ.

ಎಕ್ಸ್​ಪ್ರೆಸ್​ ವೇನಲ್ಲಿ ಟ್ರಕ್​ ಪಲ್ಟಿಯಾಗಿತ್ತು. ಇದರ ಹಿಂದಿದ್ದ 15 ರಿಂದ 20 ವಾಹನಗಳು ಜಖಂ ಆಗಿದ್ದು, ಹಾನಿಗೊಳಗಾಗಿವೆ. ಹಾನಿಗೊಳಗಾದ ವಾಹನಗಳನ್ನ ರಸ್ತೆಯಿಂದ ತೆರವು ಮಾಡಲಾಗಿದೆ. ಹಾಗೂ ಗಾಯಗೊಂಡರವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಅಂತಾ ಪೊಲೀಸ್​ ವಕ್ತಾರರು ತಿಳಿಸಿದ್ದಾರೆ.
ಟೆಂಪೋದಲ್ಲಿದ್ದ ಪ್ರಯಾಣಿಕರೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇತರೆ ನಾಲ್ವರು ಗಾಯಗೊಂಡಿದ್ದಾರೆ. ಮತ್ತೊಂದು ಅಪಘಾತದಲ್ಲಿ ಯಮುನಾ ಎಕ್ಸ್​ಪ್ರೆಸ್​​ ವೇನಲ್ಲಿ ಬಸ್​​ವೊಂದು ಟ್ರಕ್​​ಗೆ ಡಿಕ್ಕಿ ಹೊಡೆದಿದ್ದು ಇದಾದ ಬಳಿಕ 7 ವಾಹನಗಳು ಜಖಂ ಆಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...