alex Certify ಹೊಸ ವೈಶಿಷ್ಟ್ಯದಲ್ಲಿ ಬರಲಿದೆ ಮಾರುತಿ ಸುಜುಕಿಯ ವ್ಯಾಗನ್ ಆರ್: ಏನೇನಿರಲಿದೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವೈಶಿಷ್ಟ್ಯದಲ್ಲಿ ಬರಲಿದೆ ಮಾರುತಿ ಸುಜುಕಿಯ ವ್ಯಾಗನ್ ಆರ್: ಏನೇನಿರಲಿದೆ ಗೊತ್ತಾ..?

ಮಾರುತಿ ಸುಜುಕಿಯ ಬಲೆನೊ ಹ್ಯಾಚ್‌ಬ್ಯಾಕ್ ಫೆಬ್ರವರಿ 23 ರಂದು ಬಿಡುಗಡೆಯಾಗಲಿದ್ದು, ಎಲ್ಲರನ್ನೂ ಆಕರ್ಷಿಸಿದೆ. ಬಲೆನೊ ಮಾತ್ರವಲ್ಲದೆ, ಸುಜುಕಿಯು 2022 ರ ವ್ಯಾಗನ್ಆರ್ ಫೇಸ್‌ಲಿಫ್ಟ್ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ಯೋಜಿಸಿದೆ.

ಹೌದು, ಮಾರುತಿ ವ್ಯಾಗನ್‌ಆರ್‌ನ ಫೇಸ್‌ಲಿಫ್ಟ್ ನ್ಯೂ ಮಾಡೆಲ್ ಕೂಡ ಯೋಜನೆ ಹಂತದಲ್ಲಿದೆ. ಭಾರತದಲ್ಲಿ ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಫೇಸ್‌ಲಿಫ್ಟ್‌ನ ಬೆಲೆಯನ್ನು ಯಾವಾಗ ಘೋಷಿಸುತ್ತದೆ ಎಂಬುದನ್ನು ವಾಹನ ತಯಾರಕರು ಇನ್ನೂ ಖಚಿತಪಡಿಸಿಲ್ಲ. ಆದರೂ ಭಾರತದಲ್ಲಿ ಈ ಕಾರನ್ನು ಈ ತಿಂಗಳು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಈ ಕಾರಿನ ವೈಶಿಷ್ಟ್ಯಗಳನ್ನು ತಿಳಿಯುವುದು ಸೂಕ್ತವಾಗಿದೆ.

ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ 2019 ರಲ್ಲಿ ಬಿಡುಗಡೆ ಮಾಡಲಾದ ಪ್ರಸ್ತುತ ಮಾದರಿಯನ್ನು ತೆಗೆದುಕೊಳ್ಳುತ್ತದೆ. ಕಾರಿನ ಫೇಸ್‌ಲಿಫ್ಟೆಡ್ ಮಾಡೆಲ್ ಪ್ರಸ್ತುತ ವ್ಯಾಗನ್ಆರ್ ವಿನ್ಯಾಸ ಮತ್ತು ಸ್ಟೈಲಿಂಗ್ ಅನ್ನು ಹೆಚ್ಚಾಗಿ ಉಳಿಸಿಕೊಂಡಿದೆ. ಇದರರ್ಥ ಮುಂಬರುವ ಮಾರುತಿ ಸುಜುಕಿ ವ್ಯಾಗನ್ಆರ್ ಕೇವಲ ಸೂಕ್ಷ್ಮವಾದ ನವೀಕರಣಗಳನ್ನು ಪಡೆಯುತ್ತದೆ. ವಾಹನ ತಯಾರಕರು ಕನಿಷ್ಟ ಕೆಲವು ಹೊಸ ಬಣ್ಣದ ಆಯ್ಕೆಗಳನ್ನು ನೀಡಬೇಕೆಂಬುದು ಕಾರು ಪ್ರಿಯರ ನಿರೀಕ್ಷೆಯಾಗಿದೆ.

ಹೊಸ ಮಾರುತಿ ವ್ಯಾಗನ್ಆರ್ ಫೇಸ್‌ಲಿಫ್ಟ್‌ನ ಒಳಭಾಗವು ಸಂಪೂರ್ಣ ಬದಲಾವಣೆಗಳನ್ನು ಪಡೆಯುವುದಿಲ್ಲ ಎಂದು ಹೇಳಬಹುದು. ಬಹುಶಃ ಹೊಸ ಅಪ್ಹೋಲ್ಸ್ಟರಿ ಮತ್ತು ಎಂಜಿನ್ ಐಡಲ್ ಸ್ಟಾರ್ಟ್ ಸ್ಟಾಪ್ ಸಿಸ್ಟಮ್ ಮತ್ತು ನವೀಕರಿಸಿದ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಕೆಲವು ನವೀಕರಿಸಿದ ವೈಶಿಷ್ಟ್ಯಗಳು ಇರಲಿವೆ. ಅದಲ್ಲದೆ, ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಪ್ರಸ್ತುತ ಮಾದರಿಯ ವೈಶಿಷ್ಟ್ಯಗಳಾದ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.

2022ರ ಮಾರುತಿ ಸುಜುಕಿ ವ್ಯಾಗನ್ಆರ್ ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಪಡೆಯುವುದಿಲ್ಲ. ಎರಡೂ ಎಂಜಿನ್ ಆಯ್ಕೆಗಳೊಂದಿಗೆ ಟ್ರಾನ್ಸ್‌ಮಿಷನ್ ಆಯ್ಕೆಗಳು ಐದು-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐದು-ಸ್ಪೀಡ್ ಎಎಂಟಿಯನ್ನು ಇದು ಒಳಗೊಂಡಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...