alex Certify ಹೊಸ ಅವತಾರದಲ್ಲಿ ಮಿಂಚಿದ ʼಕಚ್ಚಾ ಬದಾಮ್‌ʼ ಗಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಅವತಾರದಲ್ಲಿ ಮಿಂಚಿದ ʼಕಚ್ಚಾ ಬದಾಮ್‌ʼ ಗಾಯಕ

Viral Video: Kacha Badam Singer Bhuban Badyakar Grooves On His Trending Song In New Avatar. Watch

ಪಶ್ಚಿಮ ಬಂಗಾಳದಲ್ಲಿ ಕಡಲೆಕಾಯಿ ಮಾರುತ್ತಿದ್ದ ಭುವನ್‌ ಈಗ ಇಂಟರ್ನೆಟ್‌ ಸ್ಟಾರ್.‌ ಭುವನ್‌ ಹಾಡಿರೋ ಕಚ್ಚಾ ಬದಾಮ್‌ ಅನ್ನೋ ಹಾಡು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ ಭುವನ್‌ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರೋ ವಿಡಿಯೋ ಒಂದು ಇಂಟರ್ನೆಟ್‌ ನಲ್ಲಿ ಹರಿದಾಡ್ತಾ ಇದೆ.

ಸಾಂಪ್ರದಾಯಿಕ ಕುರ್ತಾ ಮತ್ತು ಧೋತಿ ಬಿಟ್ಟು, ಭುವನ್‌ ಸೂಟ್‌ ನಲ್ಲಿ ಮಿಂಚಿದ್ದಾರೆ. ಬಂಗಾಳಿ ನಟ ನೀಲ್‌ ಭಟ್ಟಾಚಾರ್ಯ ಈ ವಿಡಿಯೋವನ್ನು ತಮ್ಮ ಇನ್‌ ಸ್ಟಾ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಈಗಾಗ್ಲೇ ವಿಡಿಯೋವನ್ನು 28 ಮಿಲಿಯನ್‌ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಕಡಲೆಕಾಯಿ ಮಾರಿ ಜೀವನ ಸಾಗಿಸ್ತಾ ಇದ್ದ ಭುವನ್‌, ತನ್ನ ಗ್ರಾಹಕರನ್ನು ಆಕರ್ಷಿಸಲು ಕಚ್ಚಾ ಬದಾಮ್‌ ಎಂಬ ಹಾಡೊಂದನ್ನು ಕಂಪೋಸ್‌ ಮಾಡಿದ್ದ. ಇದು ಸಂಗೀತಗಾರ ನಜ್ಮು ರೀಚಟ್‌ ಅವರ ಕಿವಿಗೆ ಬಿದ್ದಿತ್ತು. ಕಚ್ಚಾ ಬದಾಮ್‌ ಹಾಡನ್ನು ಅವರು ರಿಮಿಕ್ಸ್‌ ಮಾಡಿದ್ದರು. ಅದು ಇಂಟರ್ನೆಟ್‌ ನಲ್ಲಿ ಹವಾ ಎಬ್ಬಿಸಿದೆ.

ಆದ್ರೆ ಭುವನ್‌ ಗೆ ಯಾವುದೇ ರೀತಿಯ ಧನ ಸಹಾಯ ಸಿಗದೇ ಇದ್ದಿದ್ದನ್ನು ನೋಡಿ, ಸಾರ್ವಜನಿಕರು ಆಕ್ರೋಶಗೊಂಡಿದ್ದರು. ಹಾಡಿನ ನಿಜವಾದ ಸೃಷ್ಟಿಕರ್ತನಿಗೆ ಅನ್ಯಾಯವಾಗ್ತಿದೆ ಅನ್ನೋ ಕೂಗು ಎದ್ದಿರೋದನ್ನು ಗಮನಿಸಿದ ಮ್ಯೂಸಿಕ್‌ ಸಂಸ್ಥೆ ಭುವನ್‌ ಗೆ 3 ಲಕ್ಷ ರೂಪಾಯಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...