alex Certify ‘ಹೆಸರುಬೇಳೆ ಕೋಸಂಬರಿ’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹೆಸರುಬೇಳೆ ಕೋಸಂಬರಿ’ ಮಾಡುವ ವಿಧಾನ

Dharwad Cooks: ಹೆಸರುಬೇಳೆ ಕೋಸಂಬರಿ ~ Hesarubele ...

ಕೋಸಂಬರಿ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ರುಚಿಕರವಾದ ಕೋಸಂಬರಿ ಮಾಡಿಕೊಂಡು ಸವಿದರೆ ಆರೋಗ್ಯಕ್ಕೂ ಒಳ್ಳೆಯದು. ಹಾಗೇ ಇದನ್ನು ಸುಲಭವಾಗಿ ಕೂಡ ಮಾಡಿಬಿಡಬಹುದು.

ಬೇಕಾಗುವ ಸಾಮಗ್ರಿಗಳು:

ಸೌತೆಕಾಯಿ 1, ¼ ಕಪ್ ಹೆಸರುಬೇಳೆ, 2 ಹಸಿಮೆಣಸು-ಸಣ್ಣಗೆ ಹಚ್ಚಿಟ್ಟುಕೊಂಡಿದ್ದು, 1 ಟೇಬಲ್ ಸ್ಪೂನ್ –ತೆಂಗಿನಕಾಯಿ ತುರಿ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಲಿಂಬೆಹಣ್ಣಿನ ರಸ-ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:

ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದುಕೊಂಡು ½ ಕಪ್ ನೀರಿನಲ್ಲಿ 30 ನಿಮಿಷಗಳ ಕಾಲ ಈ ಹೆಸರುಬೇಳೆಯನ್ನು ನೆನೆಸಿ. ನಂತರ ಸೌತೆಕಾಯಿಯ ಸಿಪ್ಪೆ ತೆಗೆದು ಅದನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.

ನಂತರ ಹೆಸರುಬೇಳೆಯ ನೀರನ್ನು ಬಸಿದುಕೊಂಡು ಅದಕ್ಕೆ ಸೌತೆಕಾಯಿ, ಹಸಿಮೆಣಸು, ಕೊತ್ತಂಬರಿಸೊಪ್ಪು, ಉಪ್ಪು, ಲಿಂಬೆಹಣ್ಣಿನ ರಸ , ತೆಂಗಿನಕಾಯಿ ತುರಿ ಸೇರಿಸಿ ಮಿಕ್ಸ್ ಮಾಡಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...