alex Certify ಹೆದರಿಸ್ತಾನೆ……ಒದರಾಡ್ತಾನೆ……ದುರುಗುಟ್ಟಿಸಿಕೊಂಡು ನೋಡ್ತಾನೆ…..! ಇದು ಹಣ್ಣು ಮಾರಾಟಗಾರನ ಸ್ಪೆಷಲ್ ಸ್ಟೈಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆದರಿಸ್ತಾನೆ……ಒದರಾಡ್ತಾನೆ……ದುರುಗುಟ್ಟಿಸಿಕೊಂಡು ನೋಡ್ತಾನೆ…..! ಇದು ಹಣ್ಣು ಮಾರಾಟಗಾರನ ಸ್ಪೆಷಲ್ ಸ್ಟೈಲ್

ರಸ್ತೆ ಬದಿಯಲ್ಲಿ, ರೈಲ್ವೆಗಳಲ್ಲಿ, ಬೀದಿ ಬದಿಯಲ್ಲಿ, ವ್ಯಾಪಾರಿಗಳು ಮಾರಾಟ ಮಾಡುವುದನ್ನ ನಾವು ನೋಡಿರ್ತೆವೆ. ಜೋರಾಗಿ ಕೂಗ್ತಾರೆ, ಹಾಡ್ತಾರೆ, ಇನ್ನೂ ಬೇರೆ ಬೇರೆ ರೀತಿಯಲ್ಲಿ ಗ್ರಾಹಕರನ್ನ ಆಕರ್ಷಿಸೋಕೆ ಕಸರತ್ತು ಮಾಡ್ತಾರೆ. ಆದರೆ ಇಲ್ಲೊಬ್ಬ ಇದ್ದಾನೆ ನೋಡಿ ಆತ ಮಾರಾಟ ಮಾಡೋ ಸ್ಟೈಲ್ ನೋಡ್ತಿದ್ರೆ ಎಂಥವರೂ ಕೂಡಾ ಬೆಚ್ಚಿಬೀಳ್ತಾರೆ.

ಕಚ್ಚಾ ಬದಾಮ್ ಹಾಡು ನಿಮಗೆಲ್ಲ ನೆನಪಿರಬಹುದು. ಅದು ಕಡಲೆ ಮಾರಾಟ ಮಾಡುವ ವ್ಯಾಪಾರಿ ಹಾಡುವ ಹಾಡು. ಆ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಅದೇ ರೀತಿ ಬೇರೆ ಬೇರೆ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ತಾನೇ ಇರುತ್ತೆ. ಆದರೆ ಈ ಒಂದು ವಿಡಿಯೋ ಇದೆ ಅಲ್ವಾ, ಅದು ಎಂಥವರನ್ನೂ ಕೂಡಾ ಬೆಚ್ಚಿಬೀಳಿಸೋ ಹಾಗಿದೆ.

ಆತ ಓರ್ವ ಹಣ್ಣು ಮಾರಾಟಗಾರ. ಆದರೆ ಈತ ಹಣ್ಣು ಮಾರಾಟ ಮಾಡೋ ಸ್ಟೈಲ್ ಮಾತ್ರ ಭಯಾನಕ. ಹೀಗೂ ಹಣ್ಣುಗಳನ್ನ ಮಾರಾಟ ಮಾಡಬಹುದು ಅನ್ನೋದನ್ನ ತೋರಿಸಿಕೊಟ್ಟ ಮಹಾನುಭಾವ ಈತ. ನೀವು ಕೂಡಾ ಈ ಒಂದು ನಿಮಿಷದ ವಿಡಿಯೋ ನೋಡಿದ್ರೆ ದಂಗಾಗಿ ಬಿಡ್ತಿರಾ!

ಮೈ ಮೇಲೆ ದೆವ್ವ ಬಂದವನ ತರಹ ಆಡ್ತಿದ್ದಾನೆ. ಕಣ್ಣು ಬಿಡೋದು, ದುರುಗುಟ್ಟಿಕೊಂಡು ನೋಡೋದು, ಕೂಗಾಡೋದು, ಚೀರಾಡೋದು, ಕೊನೆಗೆ ವಿಕಾರವಾಗಿ ನಗೋದು. ಅಷ್ಟೇ ಅಲ್ಲ ಹಣ್ಣನ್ನ ಕೂಡಾ ಕುತ್ತಿಗೆ ಸೀಳಿದ ಹಾಗೆ ಕತ್ತರಿಸುತಾನೆ. ಹೀಗೆಲ್ಲ ಮಾಡಿದ್ರೆ ಯಾರು ಹಣ್ಣು ಖರೀದಿ ಮಾಡ್ತಾರೆ ಹೇಳಿ. ಭಯ ಆಗಿ ಆ ಅಂಗಡಿ ಹತ್ತಿರಾನೂ ಹೋಗೊಲ್ಲ.

ಆತನ ಈ ನಾನಾ ಅವತಾರ ನೋಡೋದಕ್ಕೆ ಗ್ರಾಹಕರು ಹೋಗ್ತಾರೆ. ಹಾಗೆ ಹೋದ ಓರ್ವಗ್ರಾಹತನ ಹಣ್ಣು ಮಾರಾಟ ಮಾಡೋ ಸ್ಟೈಲ್ ನೋಡಿ, ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ತನ್ನ r/funny ಅನ್ನೊ ಟ್ವಿಟರ್ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಷ್ಟೆ ಅಲ್ಲ, ಕ್ಯಾಪ್ಷನ್‌ನಲ್ಲಿ “ಈ ಹಣ್ಣು ಮಾರಾಟಗಾರನ ಅವತಾರ ನೋಡ್ತಿದ್ರೆ ನನಗೆ ಹಣ್ಣು ತಿನ್ನೊದೇ ಬೇಡ ಅಂತ ಅನ್ಸುತ್ತೆ“ ಹೀಗೆ ಬರೆದುಕೊಂಡಿದ್ದಾರೆ.

ಈಗಾಗಲೇ ಈ ವಿಡಿಯೋವನ್ನ ಸುಮಾರು 80 ಸಾವಿರ ಜನರು ನೋಡಿ ಇಷ್ಟ ಪಟ್ಟಿದ್ದಾರೆ. ಎರಡುವರೆ ಸಾವಿರಕ್ಕೂ ಹೆಚ್ಚು ಕಾಮೆಂಟ್ ಹಾಕಿದ್ದಾರೆ. ಕೆಲವರಂತೂ ಆತನ ಈ ಸ್ಟೈಲ್ ನೋಡಿ “ಮೊಗ್ಯಾಂಬೋ ಖುಷ್ ಹುವಾ“ ಅಂತ ಕಾಮೆಂಟ್ ಹಾಕಿದ್ದಾರೆ. ಒಬ್ಬರಂತೂ ಈತನಿಗೆ ಹುಚ್ಚು ಹಿಡಿದಿದೆ ಅಂತಾ ಕಾಮೆಂಟ್ ಬಾಕ್ಸ್‌ಲ್ಲಿ ಬರೆದಿದ್ದಾರೆ. ಇನ್ನೊಬ್ಬರು ಹಣ್ಣನ್ನ ಹೀಗೂ ಮಾರಬಹುದು ಅಂತ ಐಡಿಯಾ ಈ ಭೂಪ ಕೊಟ್ಟಿದ್ದಾನೆ ಅಂತ ತಮಾಷೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...