alex Certify ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದವರಿಂದ ಮೊಬೈಲ್ ಕಿತ್ತುಕೊಂಡ ಕಳ್ಳರು; ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದವರಿಂದ ಮೊಬೈಲ್ ಕಿತ್ತುಕೊಂಡ ಕಳ್ಳರು; ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಯುವಕನೊಬ್ಬ ತನ್ನ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ವೇಳೆ ಮುಸುಕು ಧರಿಸಿ ಬೈಕಿನಲ್ಲಿ ಬಂದ 12 ಮಂದಿ ಖದೀಮರು ಅವರುಗಳನ್ನು ಬೆದರಿಸಿ ಹಣ ಹಾಗೂ ಮೊಬೈಲ್ ದೋಚಿದ ಘಟನೆ ನವೆಂಬರ್ 13ರಂದು ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.

ಈ ಸಂಬಂಧ ಯತೀಶ್ ಹಾಗೂ ಸ್ನೇಹಿತರು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವ್ಯಾಪಕ ತನಿಖೆ ನಡೆಸಿದ್ದರು. ಇದೀಗ 6 ಮಂದಿಯನ್ನು ಪೊಲೀಸರು ಡಿಸೆಂಬರ್ 1ರಂದು ಹೆಡೆಮುರಿ ಕಟ್ಟಿದ್ದಾರೆ.

ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿ ಶಫಿ, ಶೇಷಾದ್ರಿಪುರಂ ನಿವಾಸಿ ಮಾರುತಿ ಅಲಿಯಾಸ್ ಕ್ಯಾಂಡಿ, ಮೆಹದಿ ನಗರದ ಅವೇಜ್ ಆಲಿ, ಬಸವನಗುಡಿಯ ಹೊನ್ನೇಶ್ ಅಲಿಯಾಸ್ ಚಿನ್ನು, ಗಣೇಶ ಹಾಗೂ ವಿನೋದ ಬಂಧಿತರಾಗಿದ್ದು, ಇವರುಗಳಿಂದ 830 ರೂಪಾಯಿ ನಗದು ಹಾಗೂ ಐದು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೃತ್ಯಕ್ಕೆ ಇವರುಗಳು ಬಳಸಿದ ಬೈಕುಗಳನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಇವರೆಲ್ಲರೂ ಈ ಹಿಂದೆ ಸಹ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. ಪರಾರಿಯಾಗಿರುವ ಇನ್ನೂ ಆರು ಮಂದಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...