alex Certify ಹೀಗಿರಲಿ ಲೆದರ್ ಶೂ ನಿರ್ವಹಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರಲಿ ಲೆದರ್ ಶೂ ನಿರ್ವಹಣೆ

ಲೆದರ್ ಶೂ ಗೆ ವಿಪರೀತ ಬೆಲೆ ಕೊಟ್ಟರೂ ಅದು ಬಾಳಿಕೆ ಬರುವುದು ಕೆಲವೇ ದಿನಗಳು ಎಂಬುದು ನಿಮ್ಮ ದೂರೇ…? ಹಾಗಿದ್ದರೆ ಇಲ್ಲಿ ಕೇಳಿ. ಲೆದರ್ ಶೂ ಸಂರಕ್ಷಿಸಿಡುವುದು ಹೇಗೆ ಎಂಬುದು ತಿಳಿಯೋಣ.

ಲೆದರ್ ಶೂ ಒದ್ದೆಯಾಗಿದ್ದರೆ ಅವುಗಳನ್ನು ಹೇಗೆ ಒಣಗಿಸಬೇಕು ಗೊತ್ತೇ. ಅವುಗಳ ಒಳಗೆ ವೃತ್ತಪತ್ರಿಕೆ ತುಂಬಿಸಿಡಿ. ಅವು ನೀರನ್ನು ಹೀರಿಕೊಳ್ಳುತ್ತವೆ. ಹೀಟರ್ ಅನ್ನು ಬಳಸದಿರಿ. ಇವು ಚರ್ಮವನ್ನು ಬಿರುಕುಗೊಳಿಸುತ್ತವೆ.

ನಿಮ್ಮ ಲೆದರ್ ಶೂ ಧೂಳಿನಿಂದ ತುಂಬಿದ್ದರೆ ಅದನ್ನು ಸ್ವಚ್ಛಗೊಳಿಸುವ ಬಟ್ಟೆಯನ್ನು ಬಿಸಿನೀರಿನಲ್ಲಿ ನೆನೆಸಿ. ಬಳಿಕ ಅದನ್ನು ಸೂರ್ಯನ ಬೆಳಕಿನಲ್ಲಿ ನೇರವಾಗಿ ಒಣಗಿಸದಿರಿ. ಅವುಗಳಿಗೆ ಬ್ರೀದಿಂಗ್ ಸ್ಪೇಸ್ ನೀಡಿ.

ಲೆದರ್ ಶೂ ರಕ್ಷಿಸಲೆಂದೇ ಎಣ್ಣೆ, ಕಂಡೀಷನರ್ ಗಳು ಲಭ್ಯವಿವೆ. ಅದನ್ನು ಎರಡು ವಾರಗಳಿಗೊಮ್ಮೆ ಬಳಸಿ. ಮೇಣದ ಪಾಲಿಶ್ ನಿಮ್ಮ ಶೂ ಗೆ ನೈಸರ್ಗಿಕ ಹೊಳಪು ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...