alex Certify ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ಭಾವಿಸಿ ಅದರೊಂದಿಗೆ ವಾಸವಿದ್ದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವಿನ ರೂಪದಲ್ಲಿ ಪತಿ ಬಂದಿದ್ದಾನೆಂದು ಭಾವಿಸಿ ಅದರೊಂದಿಗೆ ವಾಸವಿದ್ದ ಮಹಿಳೆ…!

ಎರಡು ವರ್ಷಗಳ ಹಿಂದೆ ಮೃತಪಟ್ಟ ತನ್ನ ಪತಿ ಹಾವಿನ ರೂಪದಲ್ಲಿ ಮತ್ತೆ ಮನೆಗೆ ಬಂದಿದ್ದಾನೆ ಎಂದು ಭಾವಿಸಿದ ಮಹಿಳೆಯೊಬ್ಬರು ಅದರೊಂದಿಗೆ ನಾಲ್ಕು ದಿನಗಳ ಕಾಲ ವಾಸವಿದ್ದ ವಿಲಕ್ಷಣ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ – ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನೆ ವಿವರ: ಕುಲಹಳ್ಳಿ ಗ್ರಾಮದ ಶಾರದಾ ಕಂಬಾರ ಎಂಬಾಕೆಯ ಪತಿ ಮೌನೇಶ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆದರೆ ತನ್ನ ಪತಿ ಮರಳಿ ಬರುತ್ತಾನೆ ಎಂಬ ಅಚಲ ವಿಶ್ವಾಸದಲ್ಲಿದ್ದ ಈ ಮಹಿಳೆಯ ಮನೆಗೆ ನಾಲ್ಕು ದಿನಗಳ ಹಿಂದೆ ಕೆರೆ ಹಾವೊಂದು ಬಂದಿದೆ. ಇದು ತನ್ನ ಪತಿಯೇ ಎಂದು ಭಾವಿಸಿದ ಆಕೆ ಅದರೊಂದಿಗೆ ವಾಸ ಮಾಡಲು ಆರಂಭಿಸಿದ್ದಾಳೆ.

ಮೂರ್ನಾಲ್ಕು ದಿನಗಳ ಬಳಿಕ ಗ್ರಾಮಸ್ಥರ ಗಮನಕ್ಕೆ ಈ ವಿಷಯ ಬಂದಿದ್ದು, ಹಾವನ್ನು ಹೊರ ತೆಗೆದುಕೊಂಡು ಹೋಗಲು ಯತ್ನಿಸಿದರೆ ಶಾರದಾ ಅವರನ್ನು ತಡೆದು ಇದು ನನ್ನ ಪತಿ ಇಲ್ಲಿಯೇ ಇರಲಿ ಎಂದಿದ್ದಾರೆ. ಕೊನೆಗೂ ಮಹಿಳೆಯ ಮನವೊಲಿಸಿದ ಗ್ರಾಮಸ್ಥರು ಹಾವನ್ನು ಚಾಪೆಯೊಂದರಲ್ಲಿ ಸುತ್ತಿಕೊಂಡು ಹೋಗಿ ಊರ ಹೊರವಲಯದಲ್ಲಿ ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...