alex Certify ಹಾಲಿಗೆ ಇಂಗು ಬೆರೆಸಿ ಕುಡಿಯುವುದರಿಂದ ಇದೆ ಅದ್ಭುತ ಪ್ರಯೋಜನ, ಅನೇಕ ರೋಗಗಳಿಗೂ ಇದು ರಾಮಬಾಣ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿಗೆ ಇಂಗು ಬೆರೆಸಿ ಕುಡಿಯುವುದರಿಂದ ಇದೆ ಅದ್ಭುತ ಪ್ರಯೋಜನ, ಅನೇಕ ರೋಗಗಳಿಗೂ ಇದು ರಾಮಬಾಣ…..!

ಇಂಗು ಅತ್ಯಂತ ಆರೋಗ್ಯಕರ ಮಸಾಲೆ ಪದಾರ್ಥ. ಇದರ ರುಚಿ ಮತ್ತು ಪರಿಮಳ ಬಹಳ ಸೊಗಸಾಗಿರುತ್ತದೆ. ದಿನನಿತ್ಯದ ಅಡುಗೆಗಳಲ್ಲಿ, ಅನೇಕ ಭಕ್ಷ್ಯಗಳಲ್ಲಿ ನಾವು ಇಂಗನ್ನು ಬಳಸುತ್ತೇವೆ. ಆದ್ರೆ ಇಂಗನ್ನು ಹಾಲಿಗೆ ಬೆರೆಸಿ ಕುಡಿಯುವುದರಿಂದ ಅನೇಕ ವಿಶಿಷ್ಟ ಪ್ರಯೋಜನಗಳಿವೆ. ಹಾಲು ಮತ್ತು ಇಂಗು ಎರಡೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಹಾಗಾಗಿ ಇವೆರಡನ್ನೂ ಒಟ್ಟಿಗೆ ಸೇವಿಸಿದ್ರೆ ಅನೇಕ ರೋಗಗಳನ್ನು ದೂರವಿಡಬಹುದು.

ಇಂಗು ಬೆರೆಸಿದ ಹಾಲು ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ. ಇಂಗು ಸೇವನೆಯಿಂದ ಮಲಬದ್ಧತೆ, ಅಸಿಡಿಟಿ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತವೆ. ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ಇಂಗು ಬೆರೆಸಿದ ಹಾಲನ್ನು ಸೇವಿಸಿ. ಇದನ್ನು ಕುಡಿಯುವುದರಿಂದ ಪೈಲ್ಸ್ ನೋವು ನಿವಾರಣೆಯಾಗುತ್ತದೆ. ಇದು ಗಟ್ಟಿಯಾದ ಮಲವನ್ನು ಮೃದುಗೊಳಿಸುತ್ತದೆ. ಹಾಗಾಗಿ ನೋವಿನಿಂದ ಪಾರಾಗಬಹುದು.

ಕೆಲವೊಮ್ಮೆ ಬಿಕ್ಕಳಿಕೆ ಪ್ರಾರಂಭವಾದರೆ ಅದನ್ನು ನಿಲ್ಲಿಸುವುದು ಕಷ್ಟವಾಗುತ್ತದೆ. ನಿಮಗೂ ಕೂಡ ಈ ಸಮಸ್ಯೆ ಇದ್ದರೆ ಹಾಲಿಗೆ ಇಂಗು ಬೆರೆಸಿಕೊಂಡು ಕುಡಿಯಿರಿ. ಇಂಗು ಬೆರೆಸಿದ ಹಾಲು ಯಕೃತ್ತಿಗೂ ಪ್ರಯೋಜನಕಾರಿ. ಈ ಹಾಲನ್ನು ಕುಡಿಯುವುದರಿಂದ ಲಿವರ್‌ಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಇದು ಇಡೀ ದೇಹವನ್ನು ಕ್ರಿಯಾಶೀಲವಾಗಿಸುವ ಕೆಲಸ ಮಾಡುತ್ತದೆ.

ಹಾಲು ಮತ್ತು ಇಂಗು ಬೆರೆಸಿ ಕಿವಿಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ. ಮೇಕೆ ಹಾಲಿಗೆ ಇಂಗನ್ನು ಸೇರಿಸಿದಾಗ ಅದು ಇಯರ್‌ ಡ್ರಾಪ್‌ನಂತೆ ಕಾರ್ಯನಿರ್ವಹಿಸುತ್ತದೆ. ರಾತ್ರಿಯಿಡೀ ಅದನ್ನು ಕಿವಿಯಲ್ಲಿ ಇರಿಸಿಕೊಂಡು ಬೆಳಗ್ಗೆ  ಸ್ವಚ್ಛಗೊಳಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...