alex Certify ಹಣ ಹೂಡಿಕೆಗೆ ಬೆಳ್ಳಿ ಸರಿಯಾದ ಆಯ್ಕೆಯೇ ? ಇಲ್ಲಿದೆ ಸಿಂಪಲ್ ʼಟಿಪ್ಸ್‌ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ ಹೂಡಿಕೆಗೆ ಬೆಳ್ಳಿ ಸರಿಯಾದ ಆಯ್ಕೆಯೇ ? ಇಲ್ಲಿದೆ ಸಿಂಪಲ್ ʼಟಿಪ್ಸ್‌ʼ

ಭಾರತೀಯರು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಆದರೆ ಬೆಳ್ಳಿಗಿಂತಲೂ ಚಿನ್ನಕ್ಕೆ ಆದ್ಯತೆ ಹೆಚ್ಚು. ಅಸಲಿಗೆ ಬೆಳ್ಳಿಯ ಮೇಲೆ ಮಾಡಿದ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ. ಬೆಳ್ಳಿಯ ಮೇಲೆ ಹೂಡಿಕೆ ಮಾಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದಿರಬೇಕು. ಬೆಳ್ಳಿಯ ಮೇಲೆ ಹೂಡಿಕೆಯನ್ನು ಪ್ರಾರಂಭಿಸುವುದು ತುಂಬಾ ಸುಲಭ. ಬೆಳ್ಳಿ ನಾಣ್ಯಗಳಂತಹ ಭೌತಿಕ ರೂಪಗಳನ್ನು ಹತ್ತಿರದ ಬ್ಯಾಂಕುಗಳು ಮತ್ತು ಆಭರಣ ಮಳಿಗೆಗಳಿಂದ ಸುಲಭವಾಗಿ ಖರೀದಿಸಬಹುದು.

ಇದು ಸಣ್ಣ ಹೂಡಿಕೆದಾರರಿಗೆ ದೊಡ್ಡ ವರದಾನವಾಗಿದೆ. ಬೆಳ್ಳಿ ಆಭರಣಗಳು ಮತ್ತು ಬೆಳ್ಳಿಯ ನಾಣ್ಯಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ಮನೆಯಲ್ಲಿ ಇರಿಸಬಹುದು. ಪ್ರಪಂಚದಾದ್ಯಂತದ ಕೈಗಾರಿಕೆಗಳಲ್ಲಿ ಬೆಳ್ಳಿಯನ್ನು ಬಹಳಷ್ಟು ಬಳಸಲಾಗುತ್ತದೆ. 2017 ರಲ್ಲಿ ಕೈಗಾರಿಕೆಗಳು, ಉತ್ಪಾದಿಸಿದ ಒಟ್ಟು ಬೆಳ್ಳಿಯಲ್ಲಿ ಶೇ.59ರಷ್ಟನ್ನು ಪಡೆದಿದ್ದವು. ಬೆಳ್ಳಿಯ mcx ಬೆಲೆಯನ್ನು ಮುಖ್ಯವಾಗಿ ಮಾರುಕಟ್ಟೆಯ ಮೂಲಕ ನಿರ್ಧರಿಸಲಾಗುತ್ತದೆ, ಇದು ಎಲ್ಲಾ ಬೆಳ್ಳಿ ಹೂಡಿಕೆದಾರರಿಗೆ ಸಹಾಯ ಮಾಡುವ ಪ್ರವೃತ್ತಿಯಾಗಿದೆ. ಬೆಳ್ಳಿ ತುಲನಾತ್ಮಕವಾಗಿ ಕಡಿಮೆ ಅಪಾಯಕಾರಿ.

ನೀವು ಪೋರ್ಟ್‌ಫೋಲಿಯೊದಲ್ಲಿ ಬೆಳ್ಳಿಯಲ್ಲಿ ಹೂಡಿಕೆ ಮಾಡಿದ್ದರೆ ಅದರಲ್ಲಿನ ಏರಿಳಿತದ ಅಪಾಯವನ್ನು ಕಡಿಮೆ ಮಾಡಲು ಬೆಳ್ಳಿ ಸಹಾಯ ಮಾಡುತ್ತದೆ. ಎಂಸಿಎಕ್ಸ್ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಏರಿಳಿತ ಕಾಣದಿರುವುದೇ ಇದಕ್ಕೆ ಪ್ರಮುಖ ಕಾರಣ. ಹೂಡಿಕೆಯನ್ನು ಹಲವು ವಿಧಗಳಲ್ಲಿ ಮಾಡಬಹುದು. ಸಾಂಪ್ರದಾಯಿಕ ಮಾರ್ಗದಲ್ಲಿ ಹೋಗಲು ಬಯಸಿದರೆ, ಬೆಳ್ಳಿಯ ಅಚ್ಚುಗಳು, ನಾಣ್ಯಗಳು ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸಿ. ಬೇಕಾದಾಗ ಮಾರಾಟ ಮಾಡಿ. ಭೌತಿಕ ಬೆಳ್ಳಿಯಲ್ಲಿ ವ್ಯವಹರಿಸಲು ಬಯಸದಿದ್ದರೆ, ಬೆಳ್ಳಿಯ ಕಾಗದದ ರೂಪಗಳು ಸಿಲ್ವರ್ ಫ್ಯೂಚರ್‌ಗಳು, ಎನ್‌ಎಸ್‌ಇಎಲ್ ಮತ್ತು ಇನ್ನೂ ಹಲವು ಆಯ್ಕೆಗಳು ಲಭ್ಯವಿವೆ. ಇವುಗಳಲ್ಲಿ ಸಹ ಹೂಡಿಕೆ ಮಾಡಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...