alex Certify ಸ್ವಂತ ಮನೆ ಹೊಂದುವ ಕನಸು ಈಡೇರಬೇಕೆಂದ್ರೆ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಮನೆ ಹೊಂದುವ ಕನಸು ಈಡೇರಬೇಕೆಂದ್ರೆ ಮಾಡಿ ಈ ಕೆಲಸ

ಸ್ವಂತ ಮನೆ ಹೊಂದಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕನಸು ನನಸಾಗಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಮನೆ ಕಟ್ಟಲು ಹೊರಟರೆ ಒಂದಲ್ಲಾ ಒಂದು ಸಮಸ್ಯೆ ಬರುತ್ತದೆ. ಹಾಗಾಗಿ ಅಂತವರು ಗುರುವಾರದಂದು ಈ ಪರಿಹಾರವನ್ನು ಮಾಡಿ.

ಸ್ವಗೃಹ ಯೋಗ ನಿಮ್ಮ ಜಾತಕದಲ್ಲಿರಬೇಕು. ಅದು ಸಫಲವಾಗಲು ಪ್ರತಿ ಗುರುವಾರಂದು ಸ್ನಾನಾಧಿಗಳನ್ನು ಮುಗಿಸಿ ಗುರುಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳಬೇಕು. ದೇವರಿಗೆ ಪೂಜೆ ಮಾಡಬೇಕು. ಬಳಿಕ ಆಲೂಗಡ್ಡೆಯನ್ನು ಬೇಯಿಸಿ ಅದಕ್ಕೆ ಚಿಟಿಕೆ ಅರಶಿನ ಹಾಕಿ ಕಲಸಿ 2 ಮುದ್ದೆಗಳನ್ನಾಗಿ ಮಾಡಿ.

ಬಳಿಕ ಅದರಲ್ಲಿ ಒಂದು ಮುದ್ದೆಯನ್ನು ಗೋಮಾತೆಗೆ ತಿನ್ನಿಸಿ ಇನ್ನೊಂದು ಮುದ್ದೆಯನ್ನು ಅರಳೀಮರದ ಕೆಳಗೆ ಹೂತು ನೀರು ಹಾಕಿ ಸಂಕಲ್ಪ ಮಾಡಬೇಕು. ಮನೆಗೆ ಬರುವಾಗ ತಿರುಗಿ ನೋಡಬಾರದು ನೇರವಾಗಿ ಮನೆಗೆ ಬರಬೇಕು. ಇದನ್ನು 7 ಗುರುವಾರ ಮಾಡಿದರೆ ನಿಮ್ಮ ಮನೆ ಕಟ್ಟುವ ಕನಸು ನನಸಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...