alex Certify ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ ಉದ್ಯಮಿ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಹೊಸಬಾಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1909 ರಲ್ಲಿ ಸ್ಥಾಪಿತವಾಗಿ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದೆ.

ಆದರೂ ಈ ಶಾಲೆ ಕಳೆದ 15 ವರ್ಷಗಳಿಂದ ಸುಣ್ಣ ಬಣ್ಣ ಇಲ್ಲದೇ ದುಃಸ್ಥಿತಿಗೆ ತಲುಪಿತ್ತು. ಶಾಲೆಯ ಪರಿಸ್ಥಿತಿಯನ್ನು ಎಂ.ವಿ. ಕೃಷ್ಣಪ್ಪನವರ ಗಮನಕ್ಕೆ ತರಲಾಗಿದ್ದು, ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 2 ಲಕ್ಷ ರೂ. ವಿನಿಯೋಗಿಸಿ ಸ್ವಚ್ಛತೆ ಹಾಗೂ ಸುಣ್ಣ ಬಣ್ಣ ಮಾಡಿ ಶಾಲೆಗೆ ಮರುಜೀವ ತುಂಬಿದ್ದಾರೆ.

ಈ ಮೂಲಕ ಶಾಲೆಯ ಶಿಕ್ಷಕರ ಮತ್ತು ಊರಿನ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದು, ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಡಿಡಿ ಪಿಕ್ಷರ್ಸ್ ಪ್ರೈ.ಲಿ. ಬೆಂಗಳೂರು ಇದರ ಅಧ್ಯಕ್ಷ ಎಂ.ವಿ. ಕೃಷ್ಣಪ್ಪ ಅವರ ಸೇವೆಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...