alex Certify ಇಲ್ಲಿದೆ ‘ಸ್ಟ್ರಾಬೆರಿ ಮಿಲ್ಕ್ ಶೇಕ್’ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ‘ಸ್ಟ್ರಾಬೆರಿ ಮಿಲ್ಕ್ ಶೇಕ್’ ಮಾಡುವ ವಿಧಾನ

ಮಿಲ್ಕ್ ಶೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ಬಾಯಲ್ಲೂ ನೀರು ಬರುತ್ತದೆ. ತಣ್ಣಗಿನ ಮಿಲ್ಕ್ ಶೇಕ್ ಕುಡಿಯುವುದೇ ಒಂದು ಮಜಾ. ಇಲ್ಲಿ ಸ್ಟ್ರಾಬೆರಿ ಬಳಸಿ ಮಾಡುವ ಮಿಲ್ಕ್ ಶೇಕ್ ಇದೆ ನೋಡಿ.

ಬೇಕಾಗುವ ಸಾಮಗ್ರಿಗಳು:

20 ಸ್ಟ್ರಾಬೆರಿ ಹೆಣ್ಣು, 2 ಕಪ್- ತಣ್ಣಗಿನ ಹಾಲು, 4 ಟೇಬಲ್ ಸ್ಪೂನ್- ಸಕ್ಕರೆ.

ಮಾಡುವ ವಿಧಾನ:

ಮೊದಲು ಸ್ಟ್ರಾಬೆರಿಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿದು ಇಟ್ಟುಕೊಳ್ಳಿ. ಸ್ಟ್ರಾಬೆರಿ ಹಣ್ಣಿನ ಮೇಲ್ಭಾಗದಲ್ಲಿರುವ ಹಸಿರು ಭಾಗವನ್ನು ಕತ್ತರಿಸಿಕೊಂಡು ಉಳಿದ ಕೆಂಪಗಿನ ಭಾಗವನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಒಂದು ಮಿಕ್ಸಿ ಜಾರಿಗೆ ಇದನ್ನು ಹಾಕಿ 2 ಕಪ್ ಹಾಲು ಸೇರಿಸಿ ರುಬ್ಬಿಕೊಳ್ಳಿ.

ನಂತರ ಸಕ್ಕರೆ ಸೇರಿಸಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಸ್ಟ್ರಾಬೆರಿ ಹಣ್ಣುಗಳು ಸಿಹಿಯಾಗಿದ್ದರೆ ಸಕ್ಕರೆ ಸೇರಿಸುವ ಅಗತ್ಯವಿಲ್ಲ. ನಂತರ ಇದನ್ನು ಒಂದು ಗ್ಲಾಸ್ ಗೆ ಹಾಕಿ ಸರ್ವ್ ಮಾಡಿ. ಬೇಕಿದ್ದರೆ ವೆನಿಲ್ಲಾ ಐಸ್ ಕ್ರೀಂ ಅನ್ನು ಈ ಮಿಲ್ಕ್ ಶೇಕ್ ಗೆ ಸೇರಿಸಿದರೆ ರುಚಿ ಮತ್ತಷ್ಟೂ ಹೆಚ್ಚುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...