alex Certify ಸೋಂಬೇರಿ ಪಕ್ಷಿ..! ಇದು ನೆಲದ ಮೇಲೆ ಕಾಲಿಡದ ಜಗತ್ತಿನ ಏಕೈಕ ಹಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಬೇರಿ ಪಕ್ಷಿ..! ಇದು ನೆಲದ ಮೇಲೆ ಕಾಲಿಡದ ಜಗತ್ತಿನ ಏಕೈಕ ಹಕ್ಕಿ

ಜಗತ್ತಿನಲ್ಲಿ ವಿಭಿನ್ನ, ವಿಶೇಷಗಳನ್ನು ಹೊಂದಿರುವ ಅನೇಕ ಜೀವ ವೈವಿಧ್ಯಗಳಿವೆ. ಅವುಗಳು ತಮ್ಮ ವಿಶೇಷ ಗುರುತಿಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ತನ್ನ ಇಡೀ ಜೀವನದಲ್ಲಿ ನೆಲದ ಮೇಲೆ ಕಾಲಿಡದ ಹಕ್ಕಿಯ ಬಗ್ಗೆ. ಇದನ್ನು ಕೇಳಲು ನಿಮಗೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಇದು ಸತ್ಯ…!

ಹೌದು, ಹರಿಯಲ್ ಎಂಬ ಹಕ್ಕಿಯು ತನ್ನ ಇಡೀ ಜೀವನದಲ್ಲಿ ನೆಲದ ಮೇಲೆ ಕಾಲಿಡದ ಪಕ್ಷಿ ಎಂದೇ ಜನಜನಿತವಾಗಿದೆ. ಹರಿಯಲ್ ಅನ್ನು ಮಹಾರಾಷ್ಟ್ರದ ರಾಜ್ಯಪಕ್ಷಿ ಅಂತಾನೂ ಕರೆಯುತ್ತಾರೆ. ಇವುಗಳು ದೊಡ್ಡದಾಗಿ ಬೆಳೆಯುವ ಮರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಹರಿಯಲ್ ಹಕ್ಕಿಗಳು ಆಲದ ಮರಗಳ ಮೇಲೆ ತಮ್ಮ ಗೂಡುಗಳನ್ನು ಕಟ್ಟಲು ಇಷ್ಟಪಡುತ್ತವೆ.

ಹರಿಯಲ್ ಹಕ್ಕಿಗಳು ನೋಡಲು ನಿಖರವಾಗಿ ಪಾರಿವಾಳದಂತೆ ಕಾಣುತ್ತದೆ. ಈ ಹಕ್ಕಿಯ ಬಣ್ಣ ತಿಳಿ ಬೂದು ಮತ್ತು ಹಸಿರಾಗಿದ್ದು, ಹಳದಿ ಪಟ್ಟೆಗಳನ್ನು ಹೊಂದಿದೆ. ಈ ಪಕ್ಷಿಯನ್ನು ಅದರ ಬಣ್ಣದಿಂದಾಗಿ ಹರಿಯಲ್ ಪಕ್ಷಿ ಎಂದು ಕರೆಯುತ್ತಾರೆ. ವಿಶೇಷ ಅಂದ್ರೆ ಈ ಹಕ್ಕಿಗಳು 26 ವರ್ಷಗಳ ಕಾಲ ಬದುಕುತ್ತವೆ.

ಈ ಪಕ್ಷಿಯು ಹೆಚ್ಚಾಗಿ ಭಾರತೀಯ ಉಪಖಂಡದಲ್ಲಿ ಕಂಡುಬರುತ್ತದೆ. ಆಲದ ಮರದಂತಹ ಎತ್ತರದ ಮರಗಳ ಮೇಲೆ ಮಾತ್ರ ತನ್ನ ಗೂಡನ್ನು ನಿರ್ಮಿಸುತ್ತದೆ. ಹಾಗೆಯೇ ಎಂದಿಗೂ ನೆಲದ ಮೇಲೆ ಕಾಲಿಡಲು ಇಷ್ಟಪಡುವುದಿಲ್ಲ. ಹರಿಯಲ್ ಪಕ್ಷಿಗಳು ಹುಲ್ಲಿನ ರೀತಿಯ ಎಲೆಗಳು ಮತ್ತು ಹುಲ್ಲುಗಳಿಂದ ಎತ್ತರದ ಮರಗಳಲ್ಲಿ ಗೂಡು ಕಟ್ಟುತ್ತವೆ. ಇದು ಎಲೆಗಳು, ಹಣ್ಣುಗಳು, ಹೂವಿನ ಮೊಗ್ಗುಗಳು, ಬೀಜಗಳು, ಧಾನ್ಯಗಳು, ಸಣ್ಣ ಸಸ್ಯ ಮೊಳಕೆಗಳನ್ನು ತಿನ್ನಲು ಇಷ್ಟಪಡುತ್ತದೆ. ಪ್ಲಮ್, ಚಿರೋಂಜಿ ಮತ್ತು ಬೆರ್ರಿ ಹಣ್ಣುಗಳು ಇವುಗಳ ನೆಚ್ಚಿನ ಆಹಾರವಾಗಿದೆ.

ಈ ಹಕ್ಕಿಯ ಕೊಕ್ಕು ದಪ್ಪವಾಗಿದ್ದು, ಇವುಗಳು ಮರಗಳ ಮೇಲಿರುವ ಹಣ್ಣುಗಳು ಮತ್ತು ಎಲೆಗಳ ಮೇಲಿನ ಇಬ್ಬನಿಯನ್ನು ಕುಡಿದು ತನ್ನ ಬಾಯಾರಿಕೆಯನ್ನು ನೀಗಿಸುತ್ತವೆ. ಅಷ್ಟೇ ಅಲ್ಲ, ಈ ಪಕ್ಷಿ ಸಂಕೋಚ ಸ್ವಭಾವ ಹೊಂದಿದ್ದು, ಮನುಷ್ಯರನ್ನು ಕಂಡರೆ ಸುಮ್ಮನಿರುತ್ತದೆ.

ಹರಿಯಲ್ ಪಕ್ಷಿಯನ್ನು ಹಸಿರು ಪಾರಿವಾಳ ಎಂದೂ ಕರೆಯುತ್ತಾರೆ. ಅದು ತನ್ನ ಇಡೀ ಜೀವನವನ್ನು ಮರಗಳ ಮೇಲೆಯೇ ಸೋಮಾರಿತನದಲ್ಲಿ ಕಳೆಯುತ್ತದೆ. ಈ ಹಕ್ಕಿಗಳು ಸಾಮಾನ್ಯವಾಗಿ ಉತ್ತರ ಪ್ರದೇಶದಲ್ಲಿ ಕಂಡುಬರುತ್ತದೆ. ಪಾಕಿಸ್ತಾನ, ಶ್ರೀಲಂಕಾ, ನೇಪಾಳದಲ್ಲೂ ಹರಿಯಲ್ ಪಕ್ಷಿಗಳು ಕಾಣಸಿಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...