alex Certify ಸೈಬರ್‌ ಕ್ರೈಂ ಯುಗದಲ್ಲಿ ನಿಮ್ಮ ಪಾನ್‌ ಕಾರ್ಡ್‌ ಸುರಕ್ಷಿತವಾಗಿಡುವುದು ಹೇಗೆ ? ಇಲ್ಲಿದೆ ಮಹತ್ವದ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಬರ್‌ ಕ್ರೈಂ ಯುಗದಲ್ಲಿ ನಿಮ್ಮ ಪಾನ್‌ ಕಾರ್ಡ್‌ ಸುರಕ್ಷಿತವಾಗಿಡುವುದು ಹೇಗೆ ? ಇಲ್ಲಿದೆ ಮಹತ್ವದ ಸಲಹೆ

ಪಾನ್ ಕಾರ್ಡ್ ಭಾರತೀಯ ನಾಗರಿಕರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅದನ್ನು ಸುರಕ್ಷಿತವಾಗಿರಿಸುವುದು ಕಾರ್ಡ್ ಹೊಂದಿರುವವರ ಜವಾಬ್ದಾರಿ. ಡಿಜಿಟಲ್ ಜಗತ್ತಿನ ಈ ಯುಗದಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳು ಮುನ್ನೆಲೆಗೆ ಬರುತ್ತಲೇ ಇವೆ. ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ದಾಖಲೆಗಳ ಜೊತೆಗೆ, ಪಾನ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸುವುದು ಸಹ ಅತ್ಯಗತ್ಯ. ವಂಚನೆಯ ಪ್ರಕರಣಗಳಿಂದ ಪಾನ್ ಕಾರ್ಡ್ ಅನ್ನು ಸೇವ್‌ ಮಾಡಿಕೊಳ್ಳಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.

ಪಾನ್ ಕಾರ್ಡ್ ಎಂಬುದು ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ 10 ಸಂಖ್ಯೆಗಳ ಶಾಶ್ವತ ಸಂಖ್ಯೆಯಾಗಿದ್ದು, ಇದು ಕಾರ್ಡ್ ಹೊಂದಿರುವವರ ಎಲ್ಲಾ ಹಣಕಾಸಿನ ಮಾಹಿತಿಯನ್ನು ಹೊಂದಿರುತ್ತದೆ. ಈ ಕಾರ್ಡ್ ಅನ್ನು ವ್ಯಕ್ತಿಗೆ ಖಾಸಗಿಯಾಗಿ ಅಥವಾ ಆದಾಯ ತೆರಿಗೆ ಇಲಾಖೆಯ ಪರವಾಗಿ ನೀಡಲಾಗುತ್ತದೆ. ಪಾನ್ ಕಾರ್ಡ್ ಅನ್ನು ಸುರಕ್ಷಿತವಾಗಿಡಲು, ಪಾನ್ ಕಾರ್ಡ್‌ಗೆ ಸಂಬಂಧಿಸಿದ ವಿವರಗಳನ್ನು ಅನಗತ್ಯವಾಗಿ ಯಾರೊಂದಿಗೂ ಹಂಚಿಕೊಳ್ಳದಿರುವುದು ಬಹಳ ಮುಖ್ಯ.

ಪಾನ್ ಕಾರ್ಡ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸುರಕ್ಷಿತವಾಗಿರಿಸಬೇಕು. ಆನ್‌ಲೈನ್ ವೆಬ್‌ಸೈಟ್ ಅಥವಾ ಫಾರ್ಮ್‌ನಲ್ಲಿ ಪಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡುವ ಮೊದಲು ಆ ವೆಬ್‌ಸೈಟ್‌ನ ಸಿಂಧುತ್ವವನ್ನು ಪರಿಶೀಲಿಸಿ. ಪಾನ್ ಕಾರ್ಡ್ ವಿವರಗಳನ್ನು ನೀಡಬೇಕಾದ ಅಗತ್ಯವಿದ್ದಲ್ಲಿ ಅದರ ಸಿಂಧುತ್ವವನ್ನು ಪರಿಶೀಲಿಸಿ. ಮಾಹಿತಿಯನ್ನು ಕಾನೂನುಬದ್ಧ ಸಂಸ್ಥೆ ಕೇಳಿದೆ ಎಂಬುದು ಖಚಿತವಾದ ಮೇಲಷ್ಟೆ  ಮಾಹಿತಿಯನ್ನು ಹಂಚಿಕೊಳ್ಳಿ. ನಿಮ್ಮ ಬ್ಯಾಂಕ್ ವಿವರಗಳು ಮತ್ತು ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಅನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ.

ಇದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ಟ್ಯಾಂಪರಿಂಗ್ ಇದ್ದರೆ, ಅದರ ಬಗ್ಗೆ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಪಡೆಯಬಹುದು. ಯಾವುದೇ ವಂಚನೆಯ ಬಗ್ಗೆ ನಿಮಗೆ ತಿಳಿದರೆ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಗೆ ವರದಿ ಮಾಡಿ. ಪಾನ್ ಕಾರ್ಡ್ ಸಂಬಂಧಿತ ಮಾಹಿತಿಯನ್ನು ನಿಮ್ಮ ಮೊಬೈಲ್ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಸೇವ್‌ ಮಾಡಿಕೊಳ್ಳಬೇಡಿ.  ಏಕೆಂದರೆ ನಿಮ್ಮ ಸಾಧನವನ್ನು ಯಾರಾದರೂ ಹ್ಯಾಕ್ ಮಾಡಿದರೆ ಅಥವಾ ಕಳವು ಮಾಡಿದರೆ ಸಮಸ್ಯೆಯಾಗುತ್ತದೆ. ಪಾನ್ ಕಾರ್ಡ್‌ನ ಕಲರ್‌ ಝೆರಾಕ್ಸ್‌ ಅನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...