alex Certify BIG NEWS: ಕಸ್ಟಮ್ಸ್ ಅಧಿಕಾರಿ ಹೆಸರಲ್ಲಿ ವಿಡಿಯೋ ಕಾಲ್; ಮಹಿಳೆಯನ್ನು ನಗ್ನವಾಗಿಸಿ ಬ್ಲ್ಯಾಕ್ ಮೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಸ್ಟಮ್ಸ್ ಅಧಿಕಾರಿ ಹೆಸರಲ್ಲಿ ವಿಡಿಯೋ ಕಾಲ್; ಮಹಿಳೆಯನ್ನು ನಗ್ನವಾಗಿಸಿ ಬ್ಲ್ಯಾಕ್ ಮೇಲ್

ಬೆಂಗಳೂರು: ಹಣಕ್ಕಾಗಿ ವಂಚಕರು ಮಾಡುವ ಮೋಸ ದಿನಕ್ಕೊಂದು ರೀತಿಯಲ್ಲಿ ಅನಾವರಣಗೊಳ್ಳುತ್ತಿದೆ. ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ವಂಚಕನೊಬ್ಬ ಆನ್ ಲೈನ್ ನಲ್ಲಿ ಮಹಿಳೆಗೆ 14.57 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಸ್ಟಮ್ಸ್ ಅಧಿಕಾರಿ ಎಂದು ಹೇಳಿ ವಿಡಿಯೋ ಕಾಲ್ ಮೂಲಕ ಮಹಿಳೆಯಗೆ ನಗ್ನವಾಗುವಂತೆ ಸೂಚಿಸಿ ಅದನ್ನು ರೆಕಾರ್ಡ್ ಮಾಡಿಕೊಂಡ ವಂಚಕ ಬಳಿಕ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.

ಫೆಡೆಕ್ಸ್ ಇಂಟರ್ನ್ಯಾಷನಲ್ ಕೊರಿಯರ್ ಕಂಪನಿಯಿಂದ ಎಂದು ಹೇಳಿಕೊಡು ವ್ಯಕ್ತಿ ಬೆಂಗಳೂರಿನ 29 ವರ್ಷದ ಮಹಿಳೆಗೆ ಕರೆ ಮಾಡಿದ್ದಾನೆ. ಮುಂಬೈನಿಂದ ಕರೆ ಮಾಡುತ್ತಿದ್ದೇವೆ ನಿಮ್ಮ ಹೆಸರಲ್ಲಿ ಥಾಯ್ಲೆಂಡ್ ನಿಂದ ಪಾರ್ಸೆಲ್ ವಾಪಾಸ್ ಬಂದಿದ್ದು ಅದರಲ್ಲಿ 140 ಎಂಡಿಎಂಎ ಡ್ರಗ್ಸ್ 5 ಪಾಸ್ ಪೋರ್ಟ್, 3 ಕ್ರೆಡಿಟ್ ಕರ್ಡ್ ಗಳಿವೆಪಾರ್ಸಲ್ ನಲ್ಲಿ ಮಾದಕ ವಸ್ತುಗಳಿರುವುದರಿಂದ ಅದನ್ನು ತಡೆಯಲಾಗಿದೆ ಎಂದು ವಂಚಕ ಹೇಳಿದ್ದಾನೆ.

ನೀವು ಪಾರ್ಸಲ್ ನಲ್ಲಿ ಮಾದಕ ವಸ್ತು ಇರಿಸಿಲ್ಲ ಎಂದಾದರೆ ವಂಚನೆ ದೂರು ದಾಖಲಿಸಲು ಮುಂಬೈ ಸೈಬರ್ ಕ್ರೈಂ ತಂದ ಸಂಪರ್ಕಿಸಬೇಕು. ಸೈಬರ್ ಕ್ರೈಂ ಗೆ ಕರೆ ವರ್ಗಾಯಿಸುವುದಾಗಿ ಹೇಳಿದ್ದಾನೆ. ದೂರು ನೀಡುವುದಾಗಿ ಮಹಿಳೆ ಹೇಳುತ್ತಿದ್ದಂತೆ ಸೈಬರ್ ಕ್ರೈಂ ವಿಭಗದ್ದು ಎನ್ನಲಾದ ತಂಡ ಸ್ಕೈಪ್ ಆಪ್ ಡೌನ್ ಲೋಡ್ ಮಾಡಲು ಅವರೊಂದಿಗೆ ಚಾಟ್ ಮಾಡಲು ಹಾಗೂ ಈಮೇಲ್ ಐಡಿ ನಮೂದಿಸಲು ಹೇಳಿದೆಯಂತೆ. ಅಲ್ಲದೇ ಆಧಾರ್ ಕಾರ್ಡ್ ವಿವರವನ್ನು ಪಡೆದಿದ್ದಾರೆ. ಮಹಿಳೆ ಭಯಪಟ್ಟಿದ್ದಾರೆ ಎಂಬುದನ್ನು ಅರಿತ ವಂಚಕರು ಕರೆಯನ್ನು ಕಸ್ಟಮ್ಸ್ ಅಧಿಕರಿಗೆ ವರ್ಗಾಯಿಸುವುದಾಗಿ ಹೇಳಿದೆ.

ಅಲ್ಲದೇ ಇದೊಂದು ದೊಡ್ಡ ಹಗರಣವಾಗಿದ್ದು ಪೋಷಕರು ಹಾಗೂ ಯಾರನ್ನೂ ಸಂಪರ್ಕಿಸದೇ ಮೊಬೈಲ್ ಕ್ಯಾಮರಾ ಆನ್ ಮಾಡುವಂತೆ ಸೂಚಿಸಿದ್ದಾರೆ. ಸ್ಕ್ರೀನ್ ಶೇರಿಂಗ್ ಆನ್ ನಲ್ಲಿರುವಂತೆ ತಿಳಿಸಿದ್ದಾರೆ. ರಾತ್ರಿಯಾದರೂ ಕ್ಯಾಮರಾವನ್ನು ಆನ್ ನಲ್ಲೇ ಇಡಲು ಹೇಳಿದ್ದರು. ನಂತರ ಕಸ್ಟಮ್ಸ್ ಅಧಿಕಾರಿ ಎಂಬ ವ್ಯಕ್ತಿ ನಾರ್ಕೋಟಿಕ್ ಟೆಸ್ಟ್ ನಡೆಸಬೇಕಿದೆ ಎಂದು ಹೇಳಿ ಆ ನೆಪದಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ಕ್ಯಾಮರಾದಲ್ಲಿ ಪೂಸ್ ಕೊಡಿಸಿದ್ದರು ಎಂದು ಮಹಿಳೆ ದೂರಿದ್ದಾರೆ. ಇದಾದ ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ ವಂಚಕರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ವರ್ಗಾಯಿಸದಿದ್ದರೆ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.

ಭಯಗೊಂಡ ಮಹಿಳೆ ಬರೋಬ್ಬರಿ 14.57 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ. ವಂಚನೆ ಅರಿವಾಗುತ್ತಿದ್ದಂತೆ ಮಹಿಳೆ ಸೈಬರ್ ಕ್ರೈಂ ನಲ್ಲಿ ದೂರು ದಾಖಲಿಸಿದ್ದಾರೆ. ವಂಚನೆಗೆ ಒಳಗಾದ ಮಹಿಳೆ ವೃತ್ತಿಯಲ್ಲಿ ವಕೀಲೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...