alex Certify ಸೈಫ್ ಪುತ್ರಿ ಜೊತೆಗೆ ಶುಭಮನ್ ಗಿಲ್ ಡೇಟಿಂಗ್ ? ಸಾರಾ ಬಿಟ್ಟಿರಲು ಸಾಧ್ಯವಾಗ್ತಿಲ್ವಾ ಎಂದು ಕಾಲೆಳೆದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಫ್ ಪುತ್ರಿ ಜೊತೆಗೆ ಶುಭಮನ್ ಗಿಲ್ ಡೇಟಿಂಗ್ ? ಸಾರಾ ಬಿಟ್ಟಿರಲು ಸಾಧ್ಯವಾಗ್ತಿಲ್ವಾ ಎಂದು ಕಾಲೆಳೆದ ನೆಟ್ಟಿಗರು

ಇತ್ತೀಚೆಗಷ್ಟೇ ಜಿಂಬಾಬ್ವೆ ಪ್ರವಾಸದ ಏಕದಿನ ಸರಣಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿಯೊಂದಿಗೆ ಮಿಂಚುತ್ತಿರುವ ಟೀಮ್ ಇಂಡಿಯಾ ಯುವ ಕ್ರಿಕೆಟಿಗ ಶುಭಮನ್ ಗಿಲ್, ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿಖಾನ್ ಜೊತೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ಕಾರಣರಾಗಿದ್ದಾರೆ.

ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಈ ಜೋಡಿ ಒಟ್ಟಿಗೆ ಕುಳಿತಿರುವ ಫೋಟೋವನ್ನು ಅಲ್ಲಿದ್ದವರೊಬ್ಬರು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಹೀಗಾಗಿ ಶುಭಮನ್ ಗಿಲ್ ಮತ್ತು ಸಾರಾ ಆಲಿಖಾನ್ ಡೇಟಿಂಗ್ ನಲ್ಲಿ ಇದ್ದಾರೆಯೇ ಎಂಬ ಪ್ರಶ್ನೆಗೆ ಕಾರಣರಾಗಿದ್ದಾರೆ.

ಈ ಮೊದಲು ಶುಭಮನ್ ಗಿಲ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಜೊತೆಗೆ ಕಾಣಿಸಿಕೊಂಡಿದ್ದು, ಬಳಿಕ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎಂದು ಹೇಳಲಾಗಿತ್ತು.

ಇದೀಗ ಸಾರಾ ಆಲಿಖಾನ್ ಜೊತೆ ಶುಭಮನ್ ಗಿಲ್ ಕಾಣಿಸಿಕೊಂಡ ಬಳಿಕ, ಸಾರಾ ಹೆಸರನ್ನು ನಿಮಗೆ ಮರೆಯಲು ಸಾಧ್ಯವಾಗುತ್ತಿಲ್ವಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಜೊತೆಗೆ ಆ ಹೆಸರಿನ ಮೇಲೆ ಬಹಳ ಪ್ರೀತಿ ಆಗಿರುವಂತಿದೆ ಎಂದು ಕಿಚಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...