alex Certify ಸೆಕ್ಸ್ ಹಾಗೂ ರಾಶಿಗಿರುವ ʼಸಂಬಂಧʼವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ಹಾಗೂ ರಾಶಿಗಿರುವ ʼಸಂಬಂಧʼವೇನು ಗೊತ್ತಾ….?

ರಾಶಿಗನುಗುಣವಾಗಿ ಜನರ ಸ್ವಭಾವ ಕೂಡ ಬೇರೆ ಬೇರೆಯಾಗಿರುತ್ತದೆ. ನಿಮ್ಮ ರಾಶಿ, ನಿಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಸೆಕ್ಸ್ ಲೈಫ್ ಮೇಲೆಯೂ ರಾಶಿ ಪ್ರಭಾವ ಬೀರುತ್ತದೆ. ಲೈಂಗಿಕ ಸಮಸ್ಯೆಗೂ ರಾಶಿ ಕಾರಣವಾಗುತ್ತದೆ.

ಮೇಷ : ಇವರು ಆತುರ ಸ್ವಭಾವದವರು. ಸೆಕ್ಸ್ ವಿಚಾರದಲ್ಲೂ ಆತುರ. ನಿಧಾನ ಸಂಭೋಗ ಇವ್ರಿಗೆ ಇಷ್ಟವಿಲ್ಲ. ಇದು ಸಂಗಾತಿಗಳಿಗೆ ಸಮಸ್ಯೆ ತಂದೊಡ್ಡುತ್ತದೆ.

ವೃಷಭ : ಈ ರಾಶಿಯವರು ಹಠಮಾರಿ ಸ್ವಭಾವದವರು. ಇವ್ರಿಗೆ ಹೊಸ ಪ್ರಯತ್ನ ಇಷ್ಟವಾಗುವುದಿಲ್ಲ. ಸೆಕ್ಸ್ ಲೈಫ್ ನಲ್ಲಿ ಕೂಡ ಹೊಸ ಪ್ರಯತ್ನವನ್ನು ಇಷ್ಟಪಡುವುದಿಲ್ಲ. ತಮ್ಮ ನಿಯಮದಿಂದ ಇವ್ರು ಹೊರ ಹೋಗುವುದಿಲ್ಲ.

ಮಿಥುನ : ಈ ರಾಶಿಯವರು ಅಶ್ಲೀಲ ಮಾತು ಹಾಗೂ ಫ್ಲರ್ಟ್ ಮಾಡುವುದ್ರಲ್ಲಿ ಮುಂದಿರುತ್ತಾರೆ. ಸೆಕ್ಸ್ ವಿಚಾರಕ್ಕೆ ಬಂದ್ರೆ ಅವ್ರು ಬೇರೆ ಪ್ರಪಂಚಕ್ಕೆ ಹೋಗ್ತಾರೆ. ಸಂಭೋಗದಲ್ಲೂ ಆಲೋಚನೆ ಮಾಡ್ತಾರೆ. ಇದ್ರಿಂದ ಸಂಪೂರ್ಣ ತೃಪ್ತಿ ಸಿಗುವುದಿಲ್ಲ.

ಕರ್ಕ : ಹೆಚ್ಚು ಭಾವುಕರಾಗಿರುತ್ತಾರೆ ಈ ರಾಶಿಯವರು. ಸೆಕ್ಸ್ ಗಿಂತ ಮೇಕಿಂಗ್ ಲವ್ ಮೇಲೆ ಹೆಚ್ಚಿನ ಭರವಸೆ ಹೊಂದಿರುತ್ತಾರೆ. ಸೆಕ್ಸ್ ನಲ್ಲಿಯೂ ಭಾವುಕರಾಗ್ತಾರೆ.

ಸಿಂಹ : ಈ ರಾಶಿಯವರು ತುಂಬಾ ಸರಳವಾಗಿರುತ್ತಾರೆ. ಆದ್ರೆ ಸೆಕ್ಸ್ ವಿಚಾರದಲ್ಲಿ ಅವ್ರ ಕಾರ್ಯಕ್ಷಮತೆ ಬಗ್ಗೆಯೇ ಅವ್ರಿಗೆ ಚಿಂತೆ ಕಾಡುತ್ತದೆ. ಹಾಗಾಗಿ ಸಂಭೋಗದಲ್ಲಿ ಸುಖ ಅನುಭವಿಸಲು ಸಾಧ್ಯವಾಗುವುದಿಲ್ಲ.

ಕನ್ಯಾ : ಎಲ್ಲ ವಿಚಾರದ ಬಗ್ಗೆಯೂ ಹೆಚ್ಚಿಗೆ ಆಲೋಚನೆ ಮಾಡುವ, ಎಲ್ಲವನ್ನೂ ಲೆಕ್ಕ ಹಾಕುವ ಇವ್ರು ಸೆಕ್ಸ್ ವಿಚಾರದಲ್ಲಿಯೂ ಹಾಗೆ ಇರ್ತಾರೆ. ಸಂಗಾತಿ ಇಷ್ಟು ಪ್ರೀತಿ ಮಾಡಿದ ಹಾಗಾಗಿ ನಾನು ಅಷ್ಟೇ ಪ್ರೀತಿ ನೀಡ್ತೇನೆಂಬ ಅವ್ರ ಲೆಕ್ಕಾಚಾರ ಸಂಗಾತಿಗೆ ತೊಂದರೆಯಾಗುತ್ತದೆ.

ತುಲಾ : ಸಂಗಾತಿ ಬಗ್ಗೆ ಹೆಚ್ಚು ಆಲೋಚನೆ ಮಾಡುವ ಈ ರಾಶಿಯವರು ತಮ್ಮ ನೋವನ್ನು ಮರೆಯುತ್ತಾರೆ. ಸಂಗಾತಿ ಜೊತೆ ಸೆಕ್ಸ್ ಆಸೆಯನ್ನು ಮುಕ್ತವಾಗಿ ಹೇಳಿಕೊಳ್ಳುವುದಿಲ್ಲ. ಇದು ಅವ್ರ ಲೈಂಗಿಕ ಜೀವನ ಅಸಂತೋಷವಾಗಿರಲು ಕಾರಣವಾಗುತ್ತದೆ.

ವೃಶ್ಚಿಕ : ತುಂಬಾ ಸಂವೇದನಾಶೀಲರಾಗಿರುವ ಈ ರಾಶಿಯವರು ಸೆಕ್ಸ್ ಬಗ್ಗೆ ತುಂಬಾ ಬೇಡಿಕೆಗಳನ್ನು ಮುಂದಿಡುತ್ತಾರೆ. ಸಂಗಾತಿ ತೃಪ್ತಿ ನೀಡದೆ ಹೋದಲ್ಲಿ ಅವ್ರು ನಿರಾಶೆಗೊಳ್ತಾರೆ.

ಧನು : ಸಂಗಾತಿಗೆ ಮತ್ತೊಂದು ಅವಕಾಶ ನೀಡುವುದಿಲ್ಲ. ಸಂಗಾತಿ ತನ್ನನ್ನು ತೃಪ್ತಿಗೊಳಿಸದಿರಲು ಕಾರಣವೇನು ಎಂಬುದನ್ನು ತಿಳಿಯದೆ ಸಂಗಾತಿ ಮೇಲಿರುವ ನಿರೀಕ್ಷೆಯನ್ನು ಕೈ ಬಿಡುತ್ತಾರೆ.

ಮಕರ : ಈ ರಾಶಿಯವರು ಬೆಡ್ ರೂಮಿನಲ್ಲಿ ಆಲಸಿಗಳಾಗಿರುತ್ತಾರೆ. ಸಂಗಾತಿಯೇ ಎಲ್ಲವನ್ನೂ ಮಾಡಲಿ ಎಂದು ಬಯಸುತ್ತಾರೆ. ಸೆಕ್ಸ್ ನಲ್ಲಿ ಹೊಸ ಪ್ರಯೋಗ ಮಾಡುವುದು ಇವ್ರಿಗೆ ಇಷ್ಟವಿರುವುದಿಲ್ಲ.

ಕುಂಭ : ತುಂಬಾ ಮೂಡಿ ಸ್ವಭಾವ ಇವ್ರದ್ದು. ಯಾವುದೇ ಸಂದರ್ಭಕ್ಕೆ ಹೊಂದಿಕೊಳ್ಳಲು ತುಂಬಾ ಸಮಯ ಬೇಕು. ಸೆಕ್ಸ್ ಗಾಗಿ ತುಂಬಾ ಸಮಯದಿಂದ ತಯಾರಿ ನಡೆಸುತ್ತಾರೆ. ತಮ್ಮಿಷ್ಟದಂತೆ ನಡೆಯುತ್ತಾರೆ.

ಮೀನ : ಸೆಕ್ಸ್ ವಿಚಾರದಲ್ಲಿ ತುಂಬಾ ನಿರಾಶೆಗೊಳ್ಳುವ ಈ ರಾಶಿಯವರು ಹೊಸದನ್ನು ಪ್ರಯೋಗ ಮಾಡಲು ಬಯಸುತ್ತಾರೆ. ಹೊಸ ಪ್ರಯೋಗಕ್ಕೆ ಅವಕಾಶವಿಲ್ಲವೆಂದಾದ್ರೆ ಸೆಕ್ಸ್ ಬಿಡಲೂ ಇವ್ರು ಸಿದ್ಧವಿರುತ್ತಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...